Saturday, July 2, 2022

Latest Posts

ಸೂಡಾನ್‌ ಬುಡಕಟ್ಟು ಜನರೊಂದಿಗೆ ಅರಬ್ಬರ ಘರ್ಷಣೆ: 100 ಜನರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌  
ಯುದ್ಧದಿಂದ ಧ್ವಂಸಗೊಂಡಿರುವ ಸುಡಾನ್‌ನ ಡಾರ್ಫುರ್‌ ನಗರದಲ್ಲಿ ಕಳೆದ ವಾರದಿಂದ ಮತ್ತಷ್ಟು ಉಲ್ಭಣಿಸಿರುವ ಬುಡಕಟ್ಟು ಘರ್ಷಣೆಯಲ್ಲಿ ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಹೇಳಿದೆ.
ಪಶ್ಚಿಮ ಡಾರ್ಫರ್ ಪ್ರಾಂತ್ಯದ ಕುಲ್ಬಸ್ ಪಟ್ಟಣದಲ್ಲಿ ಅರಬ್ ಮತ್ತು ಆಫ್ರಿಕನ್ ಬುಡಕಟ್ಟು ಜನಾಂಗದವರ ನಡುವಿನ ಭೂ ವಿವಾದದ ಹೋರಾಟದಲ್ಲಿ ಹಿಂಸಾಚಾರ ಉಲ್ಬಣಗೊಂಡಿದೆ ನಿರಾಶ್ರಿತರ ಸಂಸ್ಥೆಯ ಸಂಯೋಜಕ ಟೋಬಿ ಹಾರ್ವರ್ಡ್ ಹೇಳಿದ್ದಾರೆ.
ಸ್ಥಳೀಯ ಅರಬ್ ಸೇನಾಪಡೆಗಳು ಆ ಪ್ರದೇಶದಲ್ಲಿನ ಅನೇಕ ಹಳ್ಳಿಗಳ ಮೇಲೆ ದಾಳಿ ಮಾಡಿ, ಸಾವಿರಾರು ಜನರನ್ನು ಪಲಾಯನ ಮಾಡುವಂತೆ ಮಾಡಿದವು ಎಂದು ಅವರು ಹೇಳಿದರು.
ಪಟ್ಟಣದ ಬುಡಕಟ್ಟು ನಾಯಕ ಅಬ್ಕರ್ ಅಲ್-ಟೌಮ್ ಈ ಕುರಿತು ಪ್ರತಿಕ್ರಿಯಿಸಿದ್ದು, ಸೇನಾಪಡೆಗಳು 20 ಕ್ಕೂ ಹೆಚ್ಚು ಹಳ್ಳಿಗಳಿಗೆ ಬೆಂಕಿ ಹಚ್ಚಿದ್ದರಿಂದ 62 ಸುಟ್ಟುಕರಕಲಾದ ಶವಗಳು ಪತ್ತೆಯಾಗಿವೆ ಎಂದು ಹೇಳಿದರು. ಹೆಚ್ಚಿನ ಭದ್ರತಾ ಪಡೆಗಳನ್ನು ಈ ಪ್ರದೇಶಕ್ಕೆ ನಿಯೋಜಿಸಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿ ಅಬ್ಬಾಸ್ ಮುಸ್ತಫಾ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss