ಶವಗಳ ರಾಶಿಯನ್ನು ವಿಲೇವಾರಿ ಮಾಡಲಾಗದ ಪರಿಸ್ಥಿತಿ, ರಕ್ಷಣಾ ಕಾರ್ಯಾಚರಣೆಗೆ ಹವಾಮಾನ ಅಡ್ಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟರ್ಕಿ, ಸಿರಿಯಾದ ದೇಶಗಳಲ್ಲಿ ಅಕ್ಷರಶಃ ನರಕದ ವಾತಾವರಣ ಸೃಷ್ಟಿಯಾಗಿದೆ. ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಇದೀಗ ಸಾವಿನ ಸಂಖ್ಯೆ ಎಂಟು ಸಾವಿರಕ್ಕೆ ಏರಿಕೆಯಾಗಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.

ಈ ನಡುವೆ ರಕ್ಷಣಾ ಕಾರ್ಯಾಚರಣೆಗೆ ಹವಾಮಾನ ಅಡ್ಡಿಯಾಗಿದೆ. 32 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಸಾಕಷ್ಟು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಕಣ್ಮರೆಯಾಗಿರುವವರ ಸಂಖ್ಯೆ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ. ವಿಶ್ವಸಂಸ್ಥೆ ಅಂದಾಜಿನ ಅನ್ವಯ 20 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ.

ಒಟ್ಟಾರೆ 5,775 ಕಟ್ಟಡಗಳು ಬಿದ್ದಿದ್ದು, ಹಗಲು ರಾತ್ರಿ ಎನ್ನದೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅದಾಗ್ಯೂ ಕಟ್ಟಡಗಳ ಅವಶೇಷಗಳಡಿಯಿಂದ ಎಂಟು ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಟರ್ಕಿಯಲ್ಲಿ ಇದೀಗ ಚಳಿಯ ವಾತಾವರಣ, ಜತೆಗೆ ಮಳೆಯೂ ಹೆಚ್ಚಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ತೊಡಕು ಉಂಟಾಗಿದೆ.

ನಾಲ್ಕು ಲಕ್ಷ ಜನರಿಗೆ ಸರ್ಕಾರ ವಸತಿಗಳಲ್ಲಿ ಆಶ್ರಯ ನೀಡಿದೆ, ರಕ್ಷಣಾ ಕಾರ್ಯಾಚರಣೆ ನಡೆಸಿ, ಶವಗಳನ್ನು ರಸ್ತೆಯ ಮೇಲೆ ಗುಡ್ಡೆಯಂತೆ ಹಾಕಲಾಗುತ್ತಿದೆ, ಈ ಶವಗಳ ವಿಲೇವಾರಿಗೂ ಕಾರ್ಯಕರ್ತರಿಗೆ ಸಮಯ ಇಲ್ಲದಂತಾಗಿದೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!