Thursday, August 11, 2022

Latest Posts

ಅನಧಿಕೃತವಾಗಿ ಮರಳು ದಾಸ್ತಾನು: ಅಧಿಕಾರಿಗಳಿಂದ ಮುಟ್ಟುಗೋಲು

ಹೊಸ ದಿಗಂತ ವರದಿ, ಕುಶಾಲನಗರ:

ಕಾವೇರಿ ನದಿಯಿಂದ ಮರಳು ತೆಗೆದು ನಿಗದಿಪಡಿಸಿದ ಜಾಗದ ಬದಲು ಖಾಸಗಿ ಜಾಗವೊಂದರಲ್ಲಿ ಸಂಗ್ರಹ ಮಾಡಿದ್ದ ಮರಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಮಗೆ ದೊರೆತ ಖಚಿತ ಮಾಹಿತಿ ಮೇರೆಗೆ ನೆಲ್ಲಿಹುದಿಕೇರಿಯ ಖಾಸಗಿ ಜಾಗದಲ್ಲಿ ಮರಳು ದಾಸ್ತಾನು ಮಾಡಿದ್ದ ಸ್ಥಳಕ್ಕೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ, ರೋಜ, ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಸಂತೋಷ್, ನೆಲ್ಲಿಹುದಿಕೇರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿಲ್, ಗ್ರಾ.ಪಂ.ಅಧ್ಯಕ್ಷ ಸಾಬು, ಉಪಾಧ್ಯಕ್ಷೆ ಹಾಗೂ ಗ್ರಾಮ ಲೆಕ್ಕಿಗ ಸಚಿನ್ ಅವರುಗಳು ಪೊಲೀಸರೊಂದಿಗೆ ದಾಳಿ ನಡೆಸಿದರು.
ದಾಸ್ತಾನು ಇದ್ದ ಭಾರೀ ಪ್ರಮಾಣದ ಮರಳನ್ನು ವಶಪಡಿಸಿಕೊಂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ನಿರ್ಧರಿಸಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಹಸ್ತಾಂತರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss