ಅನಧಿಕೃತವಾಗಿ ಹಸುಗಳ ಸಾಗಾಟ: ಚಾಲಕನ ಬಂಧನ, ಇಬ್ಬರು ಪರಾರಿ

ಹೊಸದಿಗಂತ ವರದಿ, ಕುಶಾಲನಗರ:

ಟಾಟಾ ಮಿನಿ ವಾಹನದಲ್ಲಿ ಅನಧಿಕೃತವಾಗಿ ಹಸುಗಳನ್ನು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಕುಶಾಲನಗರ ಗ್ರಾಮಾಂತರ ಪೊಲೀಸರು ವಾಹನ ಚಾಲಕನನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಿಂದ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ‌ ದಾಳಿ ನಡೆಸಿದ ಕುಶಾಲನಗರ ಗ್ರಾಮಾಂತರ ಪೊಲೀಸ್ ಅಪರಾಧ ವಿಭಾಗ ಠಾಣಾಧಿಕಾರಿ ದಿನೇಶ್ ಕುಮಾರ್ ಅವರ ನೇತೃತ್ವದ ತಂಡ ವಾಹನ ಸೇರಿದಂತೆ ಅದರಲ್ಲಿದ್ದ ಮೂರು ಹಸು ಮತ್ತು ಮೂರು ಕರುಗಳನ್ನು ವಶಪಡಿಸಿಕೊಂಡು ಚಾಲಕ ಈಶ್ವರ ಎಂಬಾತನನ್ನು ಬಂಧಿಸಿದ್ದಾರೆ.

ಅದೇ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.
ಹೊಸ ಟಾಟಾ ಮಿನಿ ವಾಹನದಲ್ಲಿ ಹಸುಗಳನ್ನು ತುಂಬಿಸಿಕೊಂಡು ಹೊರ ಜಿಲ್ಲೆಗೆ ಸಾಗಾಟವಾಗುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಕಣಿವೆ ಸಮೀಪದ ಭುವನಗಿರಿ ಗ್ರಾಮದ ಹತ್ತಿರ ವಾಹನ ಅಡಗಟ್ಟಿದಾಗ ಟಾಟಾ ಎಸಿಯ ವಾಹನದಲ್ಲಿದ್ದ ಇಬ್ಬರು ವಾಹನದಿಂದ ನೆಗೆದು ಪರಾರಿಯಾದರು ಎನ್ನಲಾಗಿದೆ.

ಬಂಧಿತ ಆರೋಪಿಸಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಹಸು ಮತ್ತು ಕರುಗಳನ್ನು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಗೋ ಸದನಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!