ಅಂಡರ್ 19 ತಂಡ ಫೈನಲ್‌ಗೆ: ಉಪಯುಕ್ತ ಸಲಹೆ ನೀಡಿ, ಹುರಿದುಂಬಿಸಿದ ಕೊಹ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಅಂಡರ್ 19 ತಂಡ ಸತತ ನಾಲ್ಕನೇ ಬಾರಿಗೆ ಫೈನಲ್ಸ್ ಪ್ರವೇಶಿಸಿದೆ.
ಈ ಬಾರಿ ತಂಡ ಫೈನಲ್ ತಲುಪಿದ ಹಾದಿ ತುಂಬಾನೇ ರೋಚಕವಾಗಿದ್ದು, ಗೆಲುವು ಸಾಧಿಸುವ ಛಲದಲ್ಲಿ ತಂಡ ಇದೆ.
ಇಷ್ಟು ದೂರದ ಹಾದಿ ಸವೆಸಿರೋ ತಂಡಕ್ಕೆ ಗೆಲುವು ಸಿಗಲೇಬೇಕು ಎಂದು ವಿರಾಟ್ ಕೊಹ್ಲಿ ಯಶ್ ಧುಲ್ ಪಡೆಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ.
ಪ್ರಶಸ್ತಿ ಎತ್ತಿ ಹಿಡಿಯಲು ಎಲ್ಲ ತಯಾರಿ ಮಾಡಿರೋ ಟೀಂ ಜತೆಗೆ ವಿರಾಟ್ ಕೊಹ್ಲಿ ವಿಡಿಯೋ ಮೂಲಕ ಸಂವಾದ ನಡೆಸಿದ್ದು, ಆಟಕ್ಕೂ ಮುನ್ನ ಅವರನ್ನು ಹುರಿದುಂಬಿಸಿದ್ದಾರೆ.
ವಿನ್ ಆಗೋಕೆ ಬೇಕಾದ ಸಲಹೆಗಳನ್ನು ಕಿರಿಯರಿಗೆ ನೀಡಿದ್ದಾರೆ. ಸೀನಿಯರ್ ಕೋಹ್ಲಿ ಜೊತೆ ಮಾತನಾಡಿ, ಟೀಂ ಎನರ್ಜಿ ಫುಲ್ ಚಾರ್ಜ್ ಆಗಿದೆ. ಈ ಬಗ್ಗೆ ಟೀಂನ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ವಿರಾಟ್ ಕೋಹ್ಲಿ ಅವರು ಪಂದ್ಯಕ್ಕೂ ಮುನ್ನ ನಮಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಅವರಿಂದ ಸಾಕಷ್ಟು ಕಲಿತಿದ್ದೇವೆ, ಇದು ನಮಗೆ ಒಳ್ಳೆಯ ಸಹಾಯ ಆಗಲಿದೆ ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!