Saturday, June 25, 2022

Latest Posts

ಅಂಡರ್​ 19 ವಿಶ್ವಕಪ್: ಬಿಸಿಸಿಐಯಿಂದ ಟೀಮ್ ಇಂಡಿಯಾ ಪ್ರಕಟ

ಹೊಸದಿಗಂತ ದಿಗಂತ ಡೆಸ್ಕ್

ಜನವರಿ 14ರಿಂದ ಫೆಬ್ರವರಿ 5ರವರೆಗೆ ವೆಸ್ಟ್​ ಇಂಡೀಸ್​​ನಲ್ಲಿ ನಡೆಯುವ 2022ರ ಅಂಡರ್​ 19 ವಿಶ್ವಕಪ್​ಗಾಗಿ ಬಿಸಿಸಿಐ 17 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಡೆಲ್ಲಿಯ ಯಶ್​ ಧುಲ್​ ನಾಯಕನಾಗಿ ಮತ್ತು ಆಂಧ್ರಪ್ರದೇಶದ ಎಸ್​ ಕೆ ರಶೀದ್ ಉಪನಾಯಕನಾಗಿ ನೇಮಕವಾಗಿದ್ದಾರೆ.
ಈ 14ನೇ ಆವೃತ್ತಿಯ ಟೂರ್ನಿಯಲ್ಲಿ 16 ದೇಶಗಳು ಭಾಗವಹಿಸಲಿವೆ. ಒಟ್ಟು 48 ಪಂದ್ಯಗಳು 4 ಕೆರಿಬಿಯನ್ ದೇಶಗಳಲ್ಲಿ ನಡೆಯಲಿವೆ.
ಯಶ್​ ಧುಲ್(ನಾಯಕ, ಡೆಲ್ಲಿ), ಹರ್ನೂರ್ ಸಿಂಗ್(UTCA ಚಂಡೀಗಡ) ಅಂಗ್​ಕ್ರಿಶ್​ ರಘವಂಶಿ(ಮುಂಬೈ), ಎಸ್​ಕೆ ರಶೀದ್(ಆಂದ್ರ ಪ್ರದೇಶ)​, ನಿಶಾಂತ್ ಸಿಂಧು(ಹರಿಯಾಣ), ಸಿದ್ಧಾರ್ಥ್​ ಯಾದವ್​(ಉತ್ತರಪ್ರದೇಶ), ಅನೀಶ್ವರ್ ಗೌತಮ್(ಕರ್ನಾಟಕ)​, ದಿನೇಶ್ ಬಾನ(ವಿಕೀ, ಹರಿಯಾಣ) ಆರಾಧ್ಯ ಯಾದವ್​(ವಿಕೆಟ್ ಕೀಪರ್, ಉತ್ತರಪ್ರದೇಶ), ರಾಜ್​ ಅಂಗದ್ ಬಾವಾ(UTCA ಚಂಡೀಗಢ), ಮನವ್ ಪ್ರಕಾಶ್(ತಮಿಳುನಾಡು), ಕೌಶಾಲ್ ತಾಂಬೆ(ಮಹಾರಾಷ್ಟ್ರ), ಆರ್​ಎಸ್​ ಹಂಗಾರ್ಗೆಕರ್ (ಮಹಾರಾಷ್ಟ್ರ), ವಾಸು ವತ್ಸ್(ಉತ್ತರಪ್ರದೇಶ)​, ವಿಕಿ ಒಸ್ತ್ವಾಲ್(ಮಹಾರಾಷ್ಟ್ರ) , ರವಿಕುಮಾರ್(ಬೆಂಗಾಲ್), ಗರ್ವ್​ ಸಂಗ್ವಾನ್(ಹರಿಯಾಣ).
ಮೀಸಲು ಆಟಗಾರರು
ರಿಶಿತ್ ರೆಡ್ಡಿ(ಹೈದರಾಬಾದ್​), ಉದಯ್ ಶಹರನ್(ಪಂಜಾಬ್), ಅನಶ್​ ಗೋಸಾಯ್(ಸೌರಾಷ್ಟ್ರ), ಅಮೃತ್​ ರಾಜ್ ಉಪಾಧ್ಯಾಯ್(ಬೆಂಗಾಲ್), ಪಿಎಂ ಸಿಂಗ್ ರಾಥೋರ್(ರಾಜಸ್ಥಾನ್)
ಭಾರತ U19 ಬಿ ಗುಂಪಿನಲ್ಲಿದ್ದು, ಜನವರಿ 15 ರಂದು ದಕ್ಷಿಣ ಆಫ್ರಿಕಾ, ಜನವರಿ 18ರಂದು ಐರ್ಲೆಂಡ್ ಮತ್ತು ಜನವರಿ 22ರಂದು ಉಗಾಂಡ ವಿರುದ್ಧ ಸೆಣಸಾಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss