spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೆಡಿಕಲ್ ಕಾಲೇಜಿಗೆ ಅಂಡರ್ ಗ್ರೌಂಡ್ ಮೂಲಕ ಪ್ರತ್ಯೇಕವಾದ ವಿದ್ಯುತ್ ಲೈನ್: ಸ್ಥಳೀಯ ನಿವಾಸಿಗಳ ಪ್ರತಿಭಟನೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕಾರವಾರ:

ಮೆಡಿಕಲ್ ಕಾಲೇಜಿಗೆ ಅಂಡರ್ ಗ್ರೌಂಡ್ ಮೂಲಕ ಪ್ರತ್ಯೇಕವಾದ ವಿದ್ಯುತ್ ಲೈನ್ ನು ಕೋಣೆನಾಲಾ ಬಳಿಯಿಂದ ಕೊಂಡೊಯ್ಯುವದಕ್ಕೆ ವಿರೋಧಿಸಿ ನಗರಸಭೆ ಸದಸ್ಯೆಯರು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಲಂಡನ್ ಬ್ರಿಡ್ಜ್ ಸಮೀಪದಿಂದ ಪ್ರತೇಕ ಮಾರ್ಗದ ಕಾಮಗಾರಿಯನ್ನು ಹೆಸ್ಕಾಂ ದವರು ಪ್ರಾರಂಭಿಸಿದ್ದಾರೆ. ಮಾಡಿರುವ ಕಾಮಗಾರಿ ಅವೈಜ್ನಾನಿಕವಾಗಿದೆ. ಇಲ್ಲಿ ಸಾಕಷ್ಟು ಮನೆಗಳಿದ್ದು ಎನಾದರೂ ಅನಾಹುತ ಸಂಭವಿಸಿದರೆ ಯಾರು ಕಾರಣ ಇದಕ್ಕೆ ಉತ್ತರಿಸಿ ಎಂದು ಸ್ಥಳಿಯರು ಪ್ರತಿಭಟನೆಯಲ್ಲಿ ಪಟ್ಟುಹಿಡಿದರು. ಪ್ರತಿಭಟನೆಯಲ್ಲಿ ನಗರಸಭಾ ಸದಸೈಯರಾದ ಸ್ನೆಹಾ ಉಳವೇಕರ. ಮತ್ತು ಸುವಿಧಾ ಉಳ್ವೇಕರ ಅವರು ಹಾಜರಿದ್ದರು. ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷರು ಮತ್ತು ಹೆಸ್ಕಾಂ ಅಧಿಕಾರಿಗಳಿಗೆ ಎನಾದರೂ ಸಮಸ್ಯೆ ಆದರೆ ತಾವ್ ಹೊಣೆಗಾರರು ಎಂದು ಮುಚ್ಚಳಿಕೆ ಬರೆದು ಕೊಡುವಂತೆ ಆಗ್ರಹಿಸಿದರು.. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ನಗರಸಭೆ ಅಧ್ಯಕ್ಷರು ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು. ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss