Monday, August 8, 2022

Latest Posts

ಕೊರೋನಾ ಮೂರನೇ ಅಲೆಯನ್ನು ಹವಾಮಾನ ವರದಿಯಂತೆ ನೋಡದೆ,ಅದರ ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ: ಕೇಂದ್ರ ಆರೋಗ್ಯ ಸಚಿವಾಲಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೋರೋನಾ ನಿಯಮಗಳ ನಿರಂತರ ಉಲ್ಲಂಘನೆಯು ಇಲ್ಲಿಯವರೆಗೆ ನಾವು ಗಳಿಸಿದ್ದನ್ನು ವ್ಯರ್ಥವಾಗುವಂತೆ ಮಾಡುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ನಾವು 11 ರಾಜ್ಯಗಳಲ್ಲಿ ಕೇಂದ್ರ ತಂಡಗಳನ್ನು ನಿಯೋಜಿಸಿದ್ದೇವೆ. ಇವರು ಕೊರೋನಾ ನಿರ್ವಹಣೆಗೆ ಅಲ್ಲಿಯ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಬಹುದು. ಈಶಾನ್ಯ ರಾಜ್ಯಗಳಲ್ಲದೆ, ತಂಡಗಳನ್ನು ಮಹಾರಾಷ್ಟ್ರ, ಛತ್ತೀಸ್‌ಗಡ , ಕೇರಳ ಮತ್ತು ಒಡಿಶಾಗೆ ಕಳುಹಿಸಲಾಗಿದೆಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ.

ನಾವು ಮೂರನೇ ಅಲೆಯ ಬಗ್ಗೆ ಮಾತನಾಡುವಾಗ, ನಾವು ಅದನ್ನು ಹವಾಮಾನ ಮುನ್ಸೂಚನೆಯಂತೆ ತೆಗೆದುಕೊಳ್ಳುತ್ತಿದ್ದೇವೆ. ಅದರ ಗಂಭೀರತೆ ಮತ್ತು ಅದಕ್ಕೆ ಸಂಬಂಧಿಸಿದ ನಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಜನರು ನಿಯಮ ಪಾಲಿಸಿ ಎಂದು ನಾನು ವಿನಂತಿಸುತ್ತೇನೆ. ಸಕ್ರಿಯ ಪ್ರಕರಣಗಳೀಗ ಕಡಿಮೆ ಆಗುತ್ತಾ ಬರುತ್ತಿವೆ ಅಗರ್ವಾಲ್ ಎಂದರು.

ದೇಶದಲ್ಲಿ ಪ್ರಸ್ತುತ ಲಸಿಕೆ ಉತ್ಪಾದನೆ ಕ್ರಮೇಣ ಹೆಚ್ಚುತ್ತಿದೆ. ಇದು ಯೋಜಿತ ವ್ಯವಹಾರವಾಗಿದ್ದು, ಈ ಹೆಚ್ಚಳದೊಂದಿಗೆ ಲಸಿಕೆ ಲಭ್ಯವಾಗುತ್ತಿದೆ ಮತ್ತು ನಾವು ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತರಬೇಕಾಗಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪೌಲ್ ಹೇಳಿದ್ದಾರೆ.

ವಿಶ್ವವು ಮೂರನೇ ಅಲೆಗೆ ಸಾಕ್ಷಿಯಾಗಿದೆ. ಮೂರನೇ ಅಲೆ ಭಾರತಕ್ಕೆ ಅಪ್ಪಳಿಸಬಾರದು ಎಂದು ಖಚಿತಪಡಿಸಿಕೊಳ್ಳಲು ನಾವು ಕೈಜೋಡಿಸಬೇಕು. ಭಾರತದಲ್ಲಿ ಯಾವಾಗ ಬರಲಿದೆ ಎಂದು ಚರ್ಚಿಸುವ ಬದಲು ಮೂರನೇ ಅಲೆಯನ್ನು ದೂರವಿಡುವುದರತ್ತ ನಾವು ಗಮನ ಹರಿಸಬೇಕು ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪೌಲ್ ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss