ಪಾಕ್‌ ಮಹಿಳೆ ಜತೆ 2ನೇ ಮದುವೆಯಾದ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ದಾವೂದ್‌ ಇಮ್ರಾಹಿಂ ಅವರ ಸೋದರಳಿಯ ಅಲಿಶಾ ಪಾರ್ಕರ್ ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಅದೇನೆಂದರೆ ಪರಾರಿಯಾಗಿರುವ ಭೂಗತ ಪಾತಕಿ ಪಾಕಿಸ್ತಾನದ ಪಠಾಣ್ ಮಹಿಳೆಯೊಂದಿಗೆ 2ನೇ ವಿವಾಹವಾಗಿದ್ದಾನೆಂದು ಸಹೋದರಿ ಹಸೀನಾ ಪಾರ್ಕರ್ ಪುತ್ರ ಹಾಗೂ ಸೋದರಳಿಯ ಅಲಿಶಾ ಪಾರ್ಕರ್ ಹೇಳಿದ್ದಾರೆ.

ಎನ್​ಐಎ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದೆ. ಈ ನಡುವೆ ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ದಾವೂದ್​ನ ಸಹೋದರಿ ಹಸೀನಾ ಪಾರ್ಕರ್ ಪುತ್ರ ಅಲಿಶಾ ಪಾರ್ಕರ್, ವಿಚ್ಛೇದನದ ಬಗ್ಗೆ ದಾವೂದ್ ಸುಳ್ಳು ಹೇಳಿದ್ದು, 2ನೇ ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ದಾವೂದ್ ಕರಾಚಿಯಲ್ಲಿ ವಾಸವಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ದಾವೂದ್ ಇಬ್ರಾಹಿಂನ ಕುಟುಂಬ ವೃಕ್ಷದ ಬಗ್ಗೆ ಮಾಹಿತಿ ನೀಡಿದ ಅಲಿಶಾ ಪಾರ್ಕರ್‌, ಗ್ಯಾಂಇಬ್ರಾಹಿಂನ ಮೊದಲ ಪತ್ನಿ ವಾಟ್ಸಾಪ್‌ ಕಾಲ್‌ಗಳ ಮೂಲಕ ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ ಎಂದೂ ಹೇಳಿದರು.

ಎನ್‌ಐಎ ಅಧಿಕಾರಿಗಳು ಇತ್ತೀಚೆಗಷ್ಟೇ ಮುಂಬೈ ಸೇರಿದಂತೆ ಹಲವೆಡೆ ದಾಳಿ ನಡೆಸಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಭಯೋತ್ಪಾದಕ ಜಾಲವನ್ನು ಬಹಿರಂಗಪಡಿಸುವ ಮೂಲಕ ಹಲವರನ್ನು ಬಂಧಿಸಿತ್ತು.

ಅಲಿಶಾ ಪಾರ್ಕರ್ ಹೇಳಿಕೆಯ ಪ್ರಕಾರ,ದಾವೂದ್ ಇಬ್ರಾಹಿಂ ಎರಡನೇ ಮದುವೆಯಾಗಲು ತನ್ನ ಮೊದಲ ಪತ್ನಿ ಮೈಜಾಬಿನ್‌ಗೆ ವಿಚ್ಛೇದನ ನೀಡಿದ್ದಾರೆ ಎಂದು ಜನರಿಗೆ ಹೇಳುತ್ತಿದ್ದರೂ, ಇದು ನಿಜವಲ್ಲ. ಇದಲ್ಲದೇ ದಾವೂದ್ ಇಬ್ರಾಹಿಂ ವಿಳಾಸ ಬದಲಾಗಿದೆ. ಈಗ ಕರಾಚಿಯ ಅಬ್ದುಲ್ಲಾ ಗಾಜಿ ಬಾಬಾ ದರ್ಗಾದ ಹಿಂದೆ ರಹೀಮ್ ಫಕಿ ಬಳಿಯ ರಕ್ಷಣಾ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂದೂ ಹೇಳಿದ್ದಾನೆ.

ಅಲ್ಲದೆ ದಾವೂದ್ ಇಬ್ರಾಹಿಂನ ಪತ್ನಿ ಮೈಜಾಬಿನ್ ಅವರನ್ನು ತಾನು ಕೆಲವು ತಿಂಗಳ ಹಿಂದೆ ಜುಲೈ 2022 ರಲ್ಲಿ ದುಬೈನಲ್ಲಿ ಭೇಟಿಯಾಗಿದ್ದೆ ಎಂದೂ ಅಲಿಶಾ ಪಾರ್ಕರ್‌ ಹೇಳಿದ್ದಾನೆ. ದುಬೈನಲ್ಲಿರುವ ಜೈತೂನ್ ಹಮೀದ್ ಅಂತುಲೆ ಎಂಬುವವರ ಮನೆಯಲ್ಲಿ ಅವರು ತಂಗಿದ್ದರು ಎಂದೂ ಹೇಳಲಾಗಿದೆ.

ಎನ್‌ಐಎಗೆ ನೀಡಿದ ಹೇಳಿಕೆಯ ಪ್ರಕಾರ, ದಾವೂದ್ ಇಬ್ರಾಹಿಂ ಕಸ್ಕರ್ ಅವರ ಪತ್ನಿಯ ಹೆಸರು ಮೈಜಾಬಿನ್ ಮತ್ತು ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಒಬ್ಬರ ಹೆಸರು ಮಾರುಖ್ (ಜಾವೇದ್ ಮಿಯಾಂದಾದ್ ಅವರ ಮಗ ಜುನೈದ್ ಅವರನ್ನು ವಿವಾಹವಾದರು), ಇನ್ನೊಬ್ಬರು ಮೆಹ್ರಿನ್, ಮೂರನೆಯವರು ಮಜಿಯಾ (ಅವಿವಾಹಿತರು) ಮತ್ತು ಮಗ ಮೊಹಿನ್ ನವಾಜ್. ದಾವೂದ್ ಇಬ್ರಾಹಿಂನ ಎರಡನೇ ಪತ್ನಿ ಪಾಕಿಸ್ತಾನಿ ಪಠಾಣ್. ದಾವೂದ್ ಇಬ್ರಾಹಿಂ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿರುವುದನ್ನು ತೋರಿಸುತ್ತಾರೆ, ಆದರೆ ಅದು ತಪ್ಪು ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!