Monday, August 8, 2022

Latest Posts

ಕರ್ನಾಟಕದ 11 ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ಪದಕ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ 11 ಪೊಲೀಸರಿಗೆ ವಿಶೇಷ ಕಾರ್ಯಾಚರಣೆಗೆ ನೀಡುವ ಕೇಂದ್ರ ಗೃಹಮಂತ್ರಿ ಪದಕ ಘೋಷಣೆ ಆಗಿದೆ.
ಐಪಿಎಸ್ ಅಧಿಕಾರಿ ಸಂತೋಷ್ ಬಾಬುಗೆ ಪದಕ ಘೋಷಣೆ ಮಾಡಲಾಗಿದೆ. ಇನ್ಸ್​ಪೆಕ್ಟರ್​ಗಳಾದ ಜಿ.ಬಾಲರಾಜ್, ಪಿ.ಶಶಿಕುಮಾರ್​, ಹೆಚ್.ವಿ. ಸುದರ್ಶನ್, ಎಸ್.ಆರ್. ಶ್ರೀಧರ್​ಗೆ ಪದಕ ಲಭಿಸಿದೆ. ಎಎಸ್​ಐಗಳಾದ ಶೌಖತ್ ಅಲಿ, ಫಕ್ರುದ್ದೀನ್, ಅಕ್ಬರ್ ಸೋಮಶೇಖರ್​, ಕೃಷ್ಣ ದೇವೇಗೌಡಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಕೇಂದ್ರ ಗೃಹ ಇಲಾಖೆಯ ಡೈರೆಕ್ಟರ್ ( ಪೊಲೀಸ್ ) ಎ.ಕೆ.ಶರನ್ ಅವರು ಪಟ್ಟಿಯನ್ನು ಪ್ರಕಟಿಸಿದ್ದು, 2020-21ನೇ ಸಾಲಿನ ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ ಪದಕವನ್ನು ಪ್ರಕಟಿಸಲಾಗಿದೆ. ವಿವಿಧ ರಾಜ್ಯಗಳಲ್ಲಿ ಪೊಲೀಸ್ ಅಧಿಕಾರಿಗಳು ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ ಪದಕ ಪಡೆದಿದ್ದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss