Tuesday, March 28, 2023

Latest Posts

PFI ನಿಷೇಧ ಸಮರ್ಥಿಸಿಕೊಂಡ ಕೇಂದ್ರ ಸಚಿವ ಅಮಿತ್ ಶಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪಿಎಫ್‌ಐ (PFI) ನಿಷೇಧ ವಿಳಂಬ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಗೆ ಸೂಕ್ತವಾಗಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅವರು, ಪಿಎಫ್‌ಐ ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.

ಪಿಎಫ್‌ಐ (PFI) ಮತಾಂಧತೆಯನ್ನು ಭಯೋತ್ಪಾದನೆಗೆ (Terrorism) ಕಚ್ಛಾವಸ್ತುವಿನಂತೆ ಬಳಕೆ ಮಾಡಿಕೊಳ್ಳುತ್ತಿತ್ತು. ಆರಂಭದಲ್ಲಿ ಇದು ಕೇರಳ (Kerala) ಮತ್ತು ಕರ್ನಾಟಕದಲ್ಲಿ (Karnataka) ಮಾತ್ರ ಪ್ರಬಲವಾಗಿತ್ತು. ನಂತರದಲ್ಲಿ ದೇಶದ ಎಲ್ಲ ಕಡೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿತ್ತು. ಅಲ್ಲದೇ ವಿದೇಶಿ ಸಂಪರ್ಕ ಹೊಂದಿತ್ತು ಎಂದು ವಿವರಿಸಿದ್ದಾರೆ.

ದೇಶದಲ್ಲಿಪಿಎಫ್‌ಐ ಕೋಮುವಾದ ಬಳಸಿಕೊಂಡು ಗಲಭೆ ಸೃಷ್ಟಿಸುವ ಬಗ್ಗೆ ತನಿಖಾ ಸಂಸ್ಥೆಗಳು ವರದಿ ನೀಡಿದ್ದವು. ಸಾಕಷ್ಟು ದಾಖಲೆಗಳು ಲಭ್ಯವಾಗದ ಹಿನ್ನಲೆ ದೇಶದ ಸಮಗ್ರತೆಯ ದೃಷ್ಟಿಯಿಂದ ಪಿಎಫ್‌ಐ ನಿಷೇಧ ಮಾಡುವುದು ಅನಿವಾರ್ಯವಾಗಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ.

ಪಿಎಫ್‌ಐ ವಿರುದ್ಧ ಕರ್ನಾಟಕವೂ ಸೇರಿದಂತೆ ಹಲವು ಕಡೆ ಪ್ರಕರಣಗಳಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಪಿಎಫ್‌ಐ ಸದಸ್ಯರ ಮೇಲಿದ್ದ ಎಲ್ಲ ಕೇಸುಗಳನ್ನು ವಾಪಸ್ ಪಡೆಯಲಾಯಿತು. ನಾನು ಪಿಎಫ್‌ಐ-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಅಂತಾ ಎಂದೂ ಹೇಳಿಲ್ಲ. ಆದರೆ ಕಾಂಗ್ರೆಸ್ ಪಿಎಫ್‌ಐ ಅನ್ನು ಮತರಾಜಕಾರಣಕ್ಕೆ ಬಳಸಿದೆ ಅದನ್ನು ಮೀರಿಯೂ ನಾವು ಪಿಎಫ್‌ಐ ನಿಷೇಧಿಸಿದ್ದೇವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!