ಹುಬ್ಬಳ್ಳಿ- ದೆಹಲಿ ವಿಮಾನದಲ್ಲಿ ಮೊಳಗಿತು ಕನ್ನಡ ಭಾಷಾ ಸೊಗಡು: ಖುಷಿ ಹಂಚಿಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕರ್ನಾಟಕದ ಬಹುದಿನದ ಕನಸಾದ ಹುಬ್ಬಳ್ಳಿಯಿಂದ ದೆಹಲಿ ನಡುವಿನ ವಿಮಾನಯಾನದ ಸಂಚಾರಕ್ಕೆ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ವರ್ಚುವಲ್‌ ಸಭೆಯ ಮೂಲಕ ಭಾಗಿಯಾದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಸಿರು ನಿಶಾನೆ ತೋರಿಸಿದರು.

ಈ ವೇಳೆ ವಿಮಾನದಲ್ಲಿ ಪ್ರಯಾಣಿಕರನ್ನು ಸೆಳೆದ ಮತ್ತೊಂದು ವಿಚಾರವೇನೆಂದರೆ ಸ್ವಚ್ಛ ಉತ್ತರ ಕರ್ನಾಟಕ ಭಾಷೆಯಲ್ಲಿ ಫ್ಲೈಟ್‌ ಅನೌನ್ಸ್‌ಮೆಂಟ್.

ಹೌದು, ಸ್ವಚ್ಛ ಉತ್ತರ ಕರ್ನಾಟಕ ಭಾಷೆಯಲ್ಲಿ ಎಲ್ಲಾ ಪ್ರಯಾಣಿಕರನ್ನು ಫ್ಲೈಟ್‌ ಆತ್ಮೀಯವಾಗಿ ಬರಮಾಡಿಕೊಂಡರು. ಈ ಕುರಿತ ವಿಡಿಯೋವನ್ನು ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕನ್ನಡ ಭಾಷೆಯ ಸೊಗಡನ್ನು ಕೇಳಿ ಖುಷಿಪಟ್ಟರು.

‘ದೆಹಲಿ ವಿಮಾನದಾಗ ಗಂಡುಮೆಟ್ಟಿದ ನಾಡಿನ ಭಾಷಾ ಸೊಗಡು. ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್‌ ಅನೌನ್ಸ್‌ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಆಗಿದ್ದು ಇನ್ನೊಂದ ವಿಶೇಷ’ ಎಂದು ಬರೆದುಕೊಂಡಿದ್ದಾರೆ.

‘ನಮ್ಮ ಬೈಲಹೊಂಗಲದವ್ರೇ ಆದ ಅಕ್ಷಯ್‌ ಪಾಟೀಲ್ ಇವತ್ತಿನ ವಿಮಾನದ ಪೈಲೆಟ್‌ ಆಗಿದ್ರಿಂದ ಸ್ವಚ್ಛ ಉತ್ತರ ಕರ್ನಾಟಕ ಭಾಷಾದಾಗ ಎಲ್ಲಾ ಪ್ರಯಾಣೀಕರಿಗೆ ಸ್ವಾಗತ ಮಾಡಿ, ರಾಷ್ಟ್ರ ರಾಜಧಾನಿಗೆ ಕರಕೊಂಡ ಹೋದ್ರು. ಇದರಕಿಂತ ಹೆಚ್ಚಿನ ಖುಷಿ ಏನ ಬೇಕ ಹೇಳ್ರಿ..ಉಳಿಬೇಕು ನಮ್ಮ ಭಾಷಾ ಮತ್ತ ಸಂಸ್ಕೃತಿ ಅಂದ್ರ ಪಕ್ಕಾ ಆಗೇ ಆಗ್ತೈತಿ ಪ್ರಗತಿ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!