ರಾಷ್ಟ್ರಧ್ವಜಕ್ಕಿಂತ ರಾಹುಲ್ ಗಾಂಧಿಯ ಕಟೌಟೇ ಎತ್ತರವಾಯ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ನೇತೃತ್ವದಲ್ಲಿ 150 ದಿನಗಳ ಕಾಲ ನಡೆದ ಭಾರತ್‌ ಜೋಡೋ ಯಾತ್ರೆ ಇಂದು ಕೊನೆಯಾಗಲಿದೆ.

ಶ್ರೀನಗರದಲ್ಲಿ ಭಾರತ್‌ ಜೋಡೋ ಜಾತ್ರೆ ಮುಕ್ತಾಯವಾಗಲಿದ್ದು, ಶೇರ್‌ ಕಾಶ್ಮೀರ್‌ ಕ್ರೀಡಾಂಗಣಲದಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಿದೆ. ಈ ವೇಳೆ ಧ್ವಜ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಎಲ್ಲೆಡೆ ಟೀಕೆಗಳು ಕೇಳಿಬರುತ್ತಿದೆ.

ಭಾನುವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ತಮ್ಮ ಕಟೌಟ್ ಪ್ರದರ್ಶಿಸುವ ಮೂಲಕ ಧ್ವಜ ಸಂಹಿತೆ ಉಲ್ಲಂಘಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಕೊನೆಯ ದಿನದಂದು, ಇತರ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಭಾರೀ ಭದ್ರತೆಯ ನಡುವೆ ಲಾಲ್ ಚೌಕ್‌ನಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡಿದರು. ಆದರೆ ಸ್ಥಳದಲ್ಲಿ ಅಳವಡಿಸಿದ್ದ ರಾಹುಲ್ ಗಾಂಧಿ ಅವರ ಕಟೌಟ್‌ಗಳನ್ನು ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾಕಿರುವುದು ಧ್ವಜ ಸಂಹಿತೆಯ ಉಲ್ಲಂಘನೆಯಾಗಿದೆ.

“ಪಕ್ಷದ ನಾಯಕರೆಂದು ಕರೆಸಿಕೊಳ್ಳುವವರು ರಾಷ್ಟ್ರ ಧ್ವಜಾರೋಹಣ ಮಾಡುತ್ತಾರೆ ಆದರೆ ಅವರದೇ ಕಟೌಟ್ ಹಾಕುವ ಮೂಲಕ ಧ್ವಜ ಸಂಹಿತೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಧ್ವಜಾರೋಹಣ ಮಾಡಿರುವುದು ಸಂಪೂರ್ಣ ಕ್ರೌರ್ಯ” ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗುಡುಗಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಯು ಸೋಮವಾರ ಶ್ರೀನಗರದಲ್ಲಿಮುಕ್ತಾಯಗೊಂಡಿದೆ. ಯಾತ್ರೆಯ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ, ಭಾರೀ ಹಿಮಪಾತದ ನಡುವೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಎಲ್ಲಾ ‘ಭಾರತ ಯಾತ್ರಿ’ಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!