SPECIAL| ವಿಶಿಷ್ಟ ದಾಖಲೆ: 90 ನಿಮಿಷದಲ್ಲಿ 700 ಸೂರ್ಯ ನಮಸ್ಕಾರ !

– ಚಂದ್ರಶೇಖರ ಎಸ್ ಚಿನಕೇಕರ

ಚಿಕ್ಕೋಡಿ: ನೆಲ ಬಿಟ್ಟು ಮೇಲೆ ಎದ್ದೇಳದಷ್ಟು ಆಲಸಿಯಾಗಿದ್ದ ವ್ಯಕ್ತಿ ತನ್ನ ಆಲಸ್ಯತನವನ್ನೇ ಸವಾಲಾಗಿ ಸ್ವೀಕರಿಸಿ ಇಂದು ಸೂರ್ಯ ನಮಸ್ಕಾರದಲ್ಲಿ ಸಾಧನೆ ಮಾಡಿದ್ದಾನೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ನಿವಾಸಿ ತುಕಾರಾಮ ಕೋಳಿ 10 ನಿಮಿಷಗಳಲ್ಲಿ 112 ಸೂರ್ಯ ನಮಸ್ಕಾರ ಮಾಡಿ 2019 ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, 2020ರಲ್ಲಿ ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾ, 30 ನಿಮಿಷಗಳಲ್ಲಿ 278 ಸೂರ್ಯ ನಮಸ್ಕಾರ ಹಾಕಿ 2021ರಲ್ಲಿ ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

2021 ರಲ್ಲಿ 90 ನಿಮಿಷಗಳಲ್ಲಿ 700 ಸೂರ್ಯ ನಮಸ್ಕಾರ ಮಾಡಿ ಗಿನ್ನಿಸ್ ದಾಖಲೆ ಮಾಡಲು ಅರ್ಜಿ ಸಲ್ಲಿಸಿದ್ದರು. ಆದರೆ, 90 ನಿಮಿಷಗಳ ಸ್ಟ್ಯಾಂಡರ್ಡ್ ಟೈಂ ಫಾರ್ಮ್ಯಾಟ್ ಇರದ ಕಾರಣ ತುಕಾರಾಮ್ ಅವರ ಅಪ್ಲಿಕೇಶನ್ ತಿರಸ್ಕರಿಸಲಾಗಿತ್ತು. ಒಂದು ತಾಸಿನಲ್ಲಿ ಹೆಚ್ಚು ಸೂರ್ಯ ನಮಸ್ಕಾರ ಮಾಡಲು ಹೊಸ ಅಪ್ಲಿಕೇಶನ್ ಹಾಕಬೇಕು ಎಂದು ಗಿನ್ನಿಸ್ ರೆಕಾರ್ಡ್ ಟೀಂ ನಿಂದ ರಿಪ್ಲೈ ಮೇಲ್ ಬಂತು. ಹೀಗಾಗಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವುದಾಗಿ ತುಕಾರಾಂ ಹೇಳಿದರು.

ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ತುಕಾರಾಂ ಅವರು ಅದರಿಂದ ಹೊರಬರಲು 2016 ರಲ್ಲಿ ಸೂರ್ಯ ನಮಸ್ಕಾರ ಮಾಡಬೇಕೆಂದು ನಿರ್ಧರಿಸಿದ್ದರು. ಪ್ರಸ್ತುತ ಸಾರ್ವಜನಿಕರಿಗೆ ಪ್ರತಿ ದಿನ ಉಚಿತ ಯೋಗ ತರಬೇತಿ ನೀಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!