Wednesday, August 10, 2022

Latest Posts

ಜು. 19ರವರೆಗೆ ಕೊಡಗು ಅನ್ ಲಾಕ್: ಏನಿರತ್ತೆ? ಏನಿರಲ್ಲ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

  • ಹೊಸ ದಿಗಂತ ವರದಿ ಮಡಿಕೇರಿ:

    ಕೊಡಗು ಅನ್ ಲಾಕ್ ಸಂಬಂಧಿಸಿದಂತೆ ರಾಜ್ಯ ಸರಕಾರ ಗುರುವಾರ (ಜು.8) ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಸರಕಾರ ಜು.3ರಂದು ಜ ಹೊರಡಿಸಿರುವ ಆದೇಶವನ್ನು ಕೊಡಗು ಜಿಲ್ಲೆಯಲ್ಲೂ ತಕ್ಷಣದಿಂದ ಜಾರಿಗೊಳಿಸಲಾಗುತ್ತದೆ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.

    ಅದರಂತೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಜು.19ರ ಬೆಳಗ್ಗೆ 6ಗಂಟೆಯವರೆಗೆ ಈ ಕೆಳಕಂಡ ಅಂಶಗಳಂತೆ ಅನ್ ಲಾಕ್ ನಿಯಮಾವಳಿಗಳನ್ನು ಜಾರಿಗೊಳಿಸಿ ಅವರು ಆದೇಶ ಹೊರಡಿಸಿದ್ದಾರೆ.

  • ಕಂಟೈನ್ ಮೆಂಟ್ ವಲಯದಲ್ಲಿ ಯಾವುದೇ ಚಟುವಟಿಕೆಗಳು ಇರುವುದಿಲ್ಲ.
  • ಕಂಟೈನ್ ಮೆಂಟ್ ವಲಯದ ಹೊರಭಾಗದಲ್ಲೂ ಥಿಯೇಟರ್ , ಸಿನೆಮಾ ಹಾಲ್ ಮತ್ತು ಪಬ್ ಗಳ ಚಟುವಟಿಕೆಗೆ ಅವಕಾಶವಿಲ್ಲ.
  • ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಸ್ಪರ್ಧಾತ್ಮಕ ಉದ್ದೇಶದ ತರಬೇತಿಗೆ ಮಾತ್ರ ಅವಕಾಶವಿದ್ದು, ಈ ಸಂಬಂಧ ಕೋವಿಡ್ ಸಮುಚಿತ ವರ್ತನೆ ಹಾಗೂ ಸಂಬಂಧಪಟ್ಟ ಇಲಾಖೆಯ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
  • ತರಬೇತಿ ಉದ್ದೇಶಕ್ಕಾಗಿ ಮಾತ್ರ ಸ್ಪೋಟ್ಸ್೯ ಕಾಂಪ್ಲೆಕ್ಸ್ ಮತ್ತು ಸ್ಟೇಡಿಯಂಗಳನ್ನು ತೆರೆಯಬಹುದಾಗಿದ್ದು ,ಪ್ರೇಕ್ಷಕರಿಗೆ ಅವಕಾಶವಿರುವುದಿಲ್ಲ. ಈ ಸಂಬಂಧ ಕೋವಿಡ್ ಸಮುಚಿತ ವರ್ತನೆ ಹಾಗೂ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
  • ಎಲ್ಲಾ ಸಾಮಾಜಿಕ/ ರಾಜಕೀಯ/ ಕ್ರೀಡೆ/ ಮನೋರಂಜನೆ/ ಶೈಕ್ಷಣಿಕ/ ಸಾಂಸ್ಕೃತಿಕ/ ಧಾರ್ಮಿಕ ಸಮಾರಂಭಗಳು/ ಗುಂಪುಗೂಡುವಿಕೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡುವಿಕೆಗಳನ್ನು ನಿಷೇಧಿಸಲಾಗಿದೆ.
  • ಕೋವಿಡ್ – 19 ಸಮುಚಿತ ವರ್ತನೆ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಸರ್ಕಾರದ ಮಾರ್ಗಸೂಚಿಗೊಳಪಟ್ಟು ಗರಿಷ್ಠ 100 ಮಂದಿ ಮೀರದಂತೆ ಮದುವೆ / ಕೌಟುಂಬಿಕ ಸಮಾರಂಭಗಳನ್ನು ನಡೆಸಬಹುದು.
  • ಕೋವಿಡ್ – 19 ಸಮುಚಿತ ವರ್ತನೆ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಸರ್ಕಾರದ ಮಾರ್ಗಸೂಚಿಗೊಳಪಟ್ಟು ಗರಿಷ್ಠ 20 ಮಂದಿ ಮೀರದಂತೆ ಅಂತ್ಯಕ್ರಿಯೆ / ಶವಸಂಸ್ಕಾರ ನಡೆಸಬಹುದು.
  • ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ಅವಕಾಶ ಇರುವುದಿಲ್ಲ.
    ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಆಸನ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯಾಚರಿಸಲು ಅನುಮತಿಸಿದೆ.
  • ಎಲ್ಲಾ ಅಂಗಡಿ, ರೆಸ್ಟೋರೆಂಟ್, ಮಾಲ್, ಖಾಸಗಿ ಕಚೇರಿಗಳು ಮುಂತಾದವುಗಳು ಕೋವಿಡ್ – 19 ಸಮುಚಿತ ವರ್ತನೆ ಪಾಲಿಸುತ್ತಾ ಕಾರ್ಯಾಚರಿಸಬಹುದಾಗಿದ್ದು, ಉಲ್ಲಂಘನೆಯು ಡಿಸಾಸ್ಟರ್ ಮಾನೇಜ್ ಮೆಂಟ್ ಕಾಯ್ದೆಯಡಿ ದಂಡನೀಯವಾಗಿರುತ್ತದೆ.
  • ಎಲ್ಲಾ ಶೈಕ್ಷಣಿಕ ಸಂಸ್ಥೆಗಳು / ಟ್ಯಟೋರಿಯಲ್ಸ್ / ಕಾಲೇಜುಗಳು ಸರ್ಕಾರದ ಮುಂದಿನ ಆದೇಶದವರಗೆ ಮುಚ್ಚಲ್ಪಟ್ಟಿರುತ್ತದೆ.

ರಾತ್ರಿ ಕಫ್ಯೂ ಜಾರಿ: ಪ್ರತಿದಿನ ರಾತ್ರಿ 9ಗಂಟೆಯಿಂದ ಮರುದಿನ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ತುರ್ತು, ವೈದ್ಯಕೀಯ, ಸರಕು ಸಾಗಾಣಿಕೆ, ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ, ಉಳಿದಂತೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.
ಸಾರ್ವಜನಿಕರು ವಿನಾ ಕಾರಣ ತಿರುಗಾಡುವುದನ್ನು ನಿಷೇಧಿಸಿದೆ. ಕರ್ತವ್ಯದ ನಿಮಿತ್ತ ಸಂಚರಿಸುವವರು ಆಯಾ ಇಲಾಖೆ / ಸಂಸ್ಥೆ / ಕಚೇರಿಯಿಂದ ನೀಡಿದ ಅಧಿಕೃತ ಗುರುತಿನ ಚೀಟಿ ಹೊಂದಿರತಕ್ಕದ್ದು.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಸ್ ಗಳ ಸಂಚಾರ ಇರುತ್ತದೆ. ವಿಮಾನ ನಿಲ್ದಾಣ, ರೈಲ್ವೆ, ಬಸ್ ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆತರಲು ಹಾಗೂ ಕರೆದೊಯ್ಯಲು ಅವಕಾಶ ಇರುತ್ತದೆ. ಆದರೆ, ಸಂಚಾರದ ವೇಳೆ ಅಧಿಕೃತ ದಾಖಲೆ / ಟಿಕೆಟ್ ಹೊಂದಿತಕ್ಕದ್ದು.
ಸಾರ್ವಕನಿಕ ಸ್ಥಳ / ಸಾರಿಗೆ ವ್ಯವಸ್ಥೆಗಳಲ್ಲಿ ಕೋವಿಡ್ ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶದ ದುರುಪಯೋಗ ಅಥವಾ ಉಲ್ಲಂಘನೆಯು ಭಾರತ ದಂಡ ಸಂಹಿತೆ ಕಲಂ 188, ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್ 2020, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ 2005ರಡಿ ಮತ್ತು ವಿವಿಧ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss