Monday, August 8, 2022

Latest Posts

ಮುಡಾ ನಿವೇಶನದಲ್ಲಿ ಅನಧಿಕೃತ ನಿರ್ಮಿಸಿದ್ದ ಶೆಡ್ ಗಳ ತೆರವು: 12 ಕೋಟಿ ರೂ. ಮೌಲ್ಯದ ನಿವೇಶನ ವಶ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ವರದಿ, ಮೈಸೂರು:

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಹಲವು ಪ್ರದೇಶಗಳಲ್ಲಿರುವ ನಿವೇಶಗಳನ್ನು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಶೆಡ್ಡುಗಳನ್ನು ಮಂಗಳವಾರ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ ಯಂತ್ರಗಳ ಮೂಲಕ ಕಾರ್ಯಚರಣೆ ನಡೆಸಿ ತೆರವುಗೊಳಿಸಿ, ಒಟ್ಟು 12 ಕೋಟಿ ರೂ ಮೌಲ್ಯದ ನಿವೇಶನಗಳನ್ನು ಪ್ರಾಧಿಕಾರದ ವಶಕ್ಕೆ ಪಡೆದಿದ್ದಾರೆ.
ಮೈಸೂರು ನಗರದ ವಿದ್ಯಾರಣ್ಯಪುರಂ ಬಡಾವಣೆಯಲ್ಲಿನ 30×40 ಅಡಿ ಅಳತೆಯ ಸುಮಾರು 12 ನಿವೇಶನಗಳಲ್ಲಿ ಹಲವಾರು ವರ್ಷಗಳಿಂದ ಅನಧಿಕೃತವಾಗಿ 16 ಶೆಡ್ಡುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದವರನ್ನು ತೆರವುಗೊಳಿಸಿ, ಪ್ರಾಧಿಕಾರದ ವಶಕ್ಕೆ ಪಡೆದರು. ಇದರ ಅಂದಾಜು ಮೌಲ್ಯ ರೂ.8 ಕೋಟಿಗಳಾಗಿದೆ.
ಹಂಚ್ಯಾ ಗ್ರಾಮ ಸರ್ವೆ ನಂ-277/1ರ 3-31 ಎಕರೆ ಪ್ರದೇಶವನ್ನು ಪ್ರಾಧಿಕಾರವು ಭೂಸ್ವಾಧೀನಡಿಸಿಕೊಂಡು, ಹಂಚ್ಯಾ ಸಾತಗಳ್ಳಿ ‘ಎ’ ವಲಯ ಬಡಾವಣೆಯನ್ನು ರಚಿಸಲಾಗಿದೆ. ಸದರಿ ಬಡಾವಣೆಯಲ್ಲಿ ಉದ್ಯಾನವನಕ್ಕಾಗಿ ಕಾಯ್ದಿರಿಸಿದ ಜಾಗದಲ್ಲಿ 100×180 ಅಡಿ ಜಾಗಕ್ಕೆ ನಕಲಿ ದಾಖಲೆ ಸೃಷ್ಠಿಸಿ ಶೆಡ್ಡು ನಿರ್ಮಿಸಿಕೊಂಡಿದ್ದರು. ಸದರಿ ಅನಧಿಕೃತ ಶೆಡ್ಡುಗಳನ್ನು ತೆರವುಗೊಳಿಸಿ, ಪ್ರಾಧಿಕಾರದ ವಶಕ್ಕೆ ಪಡೆಯಲಾದೆ. ಸದರಿ ಸ್ವತ್ತಿನ ಅಂದಾಜು ಮೌಲ್ಯ ರೂ.4 ಕೋಟಿಗಳಾಗಿದೆ.
ಕಾರ್ಯಚರಣೆ ವೇಳೆ ಪ್ರಾಧಿಕಾರದ ವಲಯ ಅಧಿಕಾರಿಗಳಾದ ಎಸ್.ಕೆ.ಭಾಸ್ಕರ್, ಜಿ.ಮೋಹನ್, ಸಹಾಯಕ ಅಬಿಯಂತರುಗಳಾದ ಹರೀಶ್, ರಾಜಶೇಖರ್ ಹಾಗೂ ಸಿಬ್ಬಂದಿ ವರ್ಗದವರು ಸ್ಥಳದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss