Wednesday, August 10, 2022

Latest Posts

ಅನಧಿಕೃತ ಮನೆ ನಿರ್ಮಾಣ: ಪೊಲೀಸ್ ರಕ್ಷಣೆಯಲ್ಲಿ ಕಂದಾಯ ಇಲಾಖೆಯಿಂದ ತೆರವು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕುಶಾಲನಗರ:

ಕಳೆದ 10 ವರ್ಷಗಳಿಂದ ಸಮುದಾಯ ಭವನಕ್ಕಾಗಿ ಕಾಯ್ದಿರಿಸಿದ ಜಾಗದಲ್ಲಿ ರಾತ್ರೋರಾತ್ರಿ ವ್ಯಕ್ತಿಯೊಬ್ಬರು ನಿರ್ಮಿಸಿದ ಮನೆಯ ಗೋಡೆಯನ್ನು ಪೊಲೀಸ್ ಇಲಾಖೆಯ ರಕ್ಷಣೆಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 5/1 ರಲ್ಲಿ ಸಮುದಾಯದ ಭವನಕ್ಕೆ 10 ವರ್ಷಗಳಿಂದ ಜಾಗ ಕಾದಿರಿಸಲಾಗಿತ್ತು.
ಆದರೆ ಆ ಜಾಗದಲ್ಲಿ ಶಿವರಾಮ ಎಂಬವರು ಏಕಾಏಕಿ ಕಲ್ಲು ಮತ್ತು ಮಣ್ಣಿನಿನ ರಾಶಿ ಹಾಕಿದ್ದು, ಅದನ್ನು ಎರಡು ದಿನಗಳ ಒಳಗಾಗಿ ತೆರವುಗೊಳಿಸುವಂತೆ ನಾಲ್ಕು ದಿನಗಳ ಹಿಂದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಯಿಷಾ ಅವರು ನೋಟೀಸ್ ಜಾರಿಗೊಳಿಸಿದ್ದರು.
ಆದರೆ ಗಡುವು‌ ಮೀರಿದರೂ ಕಲ್ಲು ಮಣ್ಣು ತೆರವುಗೊಳ್ಳದಿದ್ದಾಗ ಗ್ರಾಮಸ್ಥರು ಕ್ಷೇತ್ರದ ಶಾಸಕರ ಗಮನಕ್ಕೆ ತಂದರು.
ಅವರ ಮೌಖಿಕ ಅದೇಶದಂತೆ ರಾತ್ರೋರಾತ್ರಿ ನಿರ್ಮಿಸಿದ ಗೋಡೆಯನ್ನು ತೆರವು ಮಾಡಿಸುವಂತೆ
ತಾಲೂಕು ಮಟ್ಟದ ಕಂದಾಯ ಅಧಿಕಾರಿಗಳು ಸೂಚಿಸಿದ್ದು, ಅದರಂತೆ ಕುಶಾಲನಗರ ಕಂದಾಯ ಇಲಾಖೆ ನಿರೀಕ್ಷಕ ಸಂತೋಷ್,
ಕೂಡಿಗೆ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಅವರುಗಳು ಸೋಮವಾರ ಬೆಳಗ್ಗೆ 10ಗಂಟೆಯೊಳಗೆ‌ ಗೋಡೆಯನ್ನು ತೆರವುಗೊಳಿಸುವಂತೆ ಶಿವರಾಮ ಅವರಿಗೆ ಸೂಚಿಸಿದರು. ಆದರೆ ಸಂಜೆ 5 ಗಂಟೆ ಅದರೂ ತೆರವುಗೊಳಿಸದ ಕಾರಣ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ರಕ್ಷಣೆಯಲ್ಲಿ ಗೋಡೆಯನ್ನು ತೆರವುಗೊಳಿಸಲಾಯಿತು.
ಅಲ್ಲದ ಗೋಡೆ ತೆರವುಗೊಂಡ ಬಳಿಕ ಕೂಡಿಗೆ ಗ್ರಾಮ ಪಂಚಾಯತಿ ವತಿಯಿಂದ ಸಮುದಾಯ ಭವನಕ್ಕೆ ಕಾಯ್ದಿರಿಸಿದ ಜಾಗ ಎಂಬ ನಾಮಫಲಕವನ್ನು ಗ್ರಾಮ ಹಾಕಲಾಯಿತು.
ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಳಾ ಪ್ರಕಾಶ್, ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಸದಸ್ಯರಾದ ಟಿ ಪಿ ಹಮೀದ್, ಜಯಶ್ರೀ, ಕೂಡಿಗೆ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಅಭಿವೃದ್ಧಿ ಅಧಿಕಾರಿ ಎಂ.ಕೆ ಅಯಿಷಾ, ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss