ನಾಯಕನ ಹೋರಾಟಕ್ಕೆ ಸಿಗದ ಪ್ರತಿಫಲ: ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾಕ್ಕೆ ಗೆಲುವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ವಿರುದ್ದದ ಏಕದಿನ ಸರಣಿಯಲ್ಲಿ ಭಾರತ ಗೆಲುವಿನ ಶುಭಾರಂಭ ಪಡೆದಿದೆ.
ಟೀಂ ಇಂಡಿಯಾ ನೀಡಿದ 373 ರನ್ ಗೆ ಉತ್ತರವಾಗಿ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 306 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ 67 ರನ್ ಗೆಲುವು ಸಾಧಿಸಿತು.

ಲಂಕಾ ನಾಯಕ ದಸೂನ್ ಶನಕ ಶತಕ ಸಿಡಿಸಿ ಗೆಲುವಿಗಾಗಿ ಹೋರಾಡಿದರೂ ನಿರಾಶೆ ಮೂಡಿದೆ.

374 ರನ್ ಬೃಹತ್ ಟಾರ್ಗೆಟ್ ಶ್ರೀಲಂಕಾ ತಂಡ ಪರ ಅವಿಶ್ಕೋ ಫರ್ನಾಂಡೋ 5 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಕುಸಾಲ್ ಮೆಂಡೀಸ್ ಡಕೌಟ್ ಆದರು.

ಬಳಿಕ ಚಾರಿತ್ ಅಸಲಂಕ ಜೊತೆ ನಿಸಂಕ ಹೋರಾಟ ಮುಂದುವರಿಸಿದರು. ಆದರೆ ಚಾರಿತ್ ಅಸಲಂಕ 23 ರನ್ ಸಿಡಿಸಿ ಔಟಾದರು. ಇತ್ತ ನಿಸಂಕ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಧನಂಜಯ್ ಡಿಸಿಲ್ವ ಹಾಗೂ ಪಥುಮ್ ನಿಸಂಕಾ ಜೊತೆಯಾಟದಿಂದ ಶ್ರೀಲಂಕಾ ಮತ್ತೆ ಚೇಸಿಂಗ್ ಟ್ರ್ಯಾಕ್‌ಗೆ ಮರಳಿತು. ಆದರೆ ಧನಂಜಯ 40 ಎಸೆತದಲ್ಲಿ 47 ರನ್ ಸಿಡಿಸಿ ಔಟಾದರು.

ಇತ್ತ ಪಥುಮ್ ನಿಸಂಕ 80 ಎಸೆತದಲ್ಲಿ 72 ರನ್ ಕಾಣಿಕೆ ನೀಡಿದರು. ಬಳಿಕ ನಾಯ ದಸೂನ್ ಶನಕ ಜವಾಬ್ದಾರಿ ಜೊತೆಗೆ ಕುಸಿದ ತಂಡವನ್ನು ಮೇಲಕ್ಕೆತ್ತಲು ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶನ ನೀಡಿದರು.ಆದ್ರೆಉತ್ತಮ ಸಾಥ್ ಸಿಗದೇ ಎಡವಿದರು.

ವಾನಿಂಡು ಹಸರಂಗ16 ರನ್ ಸಿಡಿಸಿ ಔಟಾದರು. ದುನೀತ್ ವೆಲ್ಲಾಲೆಗೆ ಡಕೌಟ್ ಆದರು. ಚಮಿಕಾ ಕರುಣಾರತ್ನೆ 14 ರನ್ ಕಾಣಿಕೆ ನೀಡಿದರು.
ಅಂತಿಮವಾಗಿ ದಸೂನ್ ಶನಕ 88 ಎಸತೆದಲ್ಲಿ ಅಜೇಯ 108 ರನ್ ಸಿಡಿಸಿದರು. ಇತ್ತ ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 306 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!