ಶಿವಮೊಗ್ಗ ಪಾಲಿಕೆಯಿಂದ ಅವೈಜ್ಞಾನಿಕ ನೀರಿನ ಬಿಲ್: ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಆಕ್ರೋಶ

ಹೊಸದಿಗಂತ ವರದಿ, ಶಿವಮೊಗ್ಗ:
ನಗರದ ಎಲ್ಲಾ ಮನೆಗಳಿಗೂ ಮೀಟರ್ ಅಳವಡಿಸುವ ತನಕ ಯಾರೂ ಕೂಡ ಮಹಾನಗರ ಪಾಲಿಕೆಗೆ ನೀರಿನ ಕಂದಾಯ ಪಾವತಿ ಮಾಡಬಾರದು ಎಂದು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಮನವಿ ಮಾಡಿದೆ.
ಮೀಟರ್ ಅಳವಡಿಸಿರುವ ಗ್ರಾಹಕರಿಗೆ ಮನಬಂದಂತೆ ನೀರಿನ ಬಿಲ್ ನೀಡಿರುವ ಸಂಬಂಧ ಮೂರ್ನಾಲ್ಕು ಬಾರಿ ಮನವಿ ನೀಡಿದರೂ ಸ್ಥಳೀಯ ಶಾಸಕರು ಸಭೆ ಕರೆದಿಲ್ಲ ಎಂದು ಆರೋಪಿಸಿ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಈ ಮನವಿ ಮಾಡಿದ್ದಾರೆ.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಮಾತನಾಡಿ, ಕುಡಿಯುವ ನೀರಿನ ಬಿಲ್ ಸಂಬಂಧ ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಒಂದು ಸಭೆ ಕರೆದಿಲ್ಲ. ಅಷ್ಟೊಂದು ನಿರ್ಲಕ್ಷ್ಯವೇ. ಇದರ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ 25,000 ಲೀಟರ್ ನೀರು ಬಳಸಿದರೆ 150 ರೂ. ಶುಲ್ಕ ಇದೆ. ಅದೇ ಶಿವಮೊಗ್ಗದಲ್ಲಿ 275 ರೂ. ಶುಲ್ಕ ಹಾಕಿದ್ದಾರೆ. 50,000 ಲೀಟರ್‌ಗೆ ಮೈಸೂರಿನಲ್ಲಿ 275 ರೂ. ದರ ಇದ್ದರೆ, ಅದೇ ಶಿವಮೊಗ್ಗದಲ್ಲಿ 400 ರೂ. ನಿಗದಿ ಮಾಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಸುಮಾರು 61,000 ನೀರಿನ ತೆರಿಗೆದಾರರು ಇದ್ದಾರೆ. ಅದರಲ್ಲಿ ಈವರೆಗೆ 6500 ಜನರಿಗೆ ಮಾತ್ರ ಮೀಟರ್ ಅಳವಡಿಸಿ ಬಿಲ್ ನೀಡಿದ್ದಾರೆ. ಮೊದಲು 61,000 ಮನೆಗಳಿಗೂ ಮೀಟರ್ ಅಳವಡಿಸಿ. ನಂತರ ಬಿಲ್ ನೀಡಿ ಎಂದು ಒತ್ತಾಯಿಸಿದರು.
ಡಾ.ಸತೀಶ್‌ಕುಮಾರ್ ಶೆಟ್ಟಿ, ಸೋಮಶೇಖರಪ್ಪ, ಸುಬ್ರಹ್ಮಣ್ಯ, ನರಸಿಂಹ ಕಿಣಿ, ಜನಾರ್ದನ ಪೈ, ಜನಮೇಜಿರಾವ್, ಎಸ್.ಬಿ.ಅಶೋಕ ಕುಮಾರ್ ಇನ್ನಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!