ಬ್ರಿಟೀಷರನ್ನು ಕಂಗೆಡಿಸಿದ್ದ ʼಪೈಕಾʼ ದಂಗೆಯ ರೂವಾರಿ ಬಗ್ಗೆ ನಿಮಗೆ ಗೊತ್ತಾ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಬಕ್ಸಿ ಜಗಬಂಧು ಬಿದ್ಯಾಧರ್ ಮೊಹಪಾತ್ರ ಭ್ರಮರಬರ್ ರೇ 1847 ರಲ್ಲಿ ಖುರ್ದಾ ಪ್ರದೇಶದಲ್ಲಿ ನಡೆದ ಐತಿಹಾಸಿಕ ಪೈಕಾ ದಂಗೆಯ ನಾಯಕರಾಗಿದ್ದರು.
ರೋಧಂಗ ಪ್ರದೇಶದ ಭೂಮಾಲೀಕರಾಗಿದ್ದ ಭ್ರಮರಬರ್ ರೇ ಬ್ರಿಟೀಷರ ವಿರುದ್ಧ ತೋರಿದ ಉಗ್ರ ಹೋರಾಟಗಳಿಂದಲೇ ಮುನ್ನೆಲೆಗೆ ಬಂದವರು. ಅವರ ಪರಾಕ್ರಮಗಳನ್ನು ಮೆಚ್ಚಿದ ಖುರ್ದ ರಾಜನಿಂದ ಸೇನಾಪತಿಯಾಗಿ ನೇಮಕಗೊಂಡರು. ಖುರ್ದಾ ಭಾಗದ ರೈತರು  ಪ್ರತಿರೋಧ ತೋರುತ್ತಾರೆಂದು ಬ್ರಿಟೀಷರು ಭಾರೀ ತೆರಿಗೆ ವಿಧಿಸಿದ್ದರು ಹಾಗೂ ಜಮೀನುಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಅತಿಕ್ರಮಿಸಿಕೊಳ್ಳುತ್ತಿದ್ದರು. ಇದನ್ನು ವಿರೋಧಿಸಿ ಹೋರಾಟಕ್ಕಿಳಿದ ಭ್ರಮರಬರ್ ರೇ ರೈತರ ಧ್ವನಿಯಾದರು.
ಉಪ್ಪಿನ ತಯಾರಿಕೆಯ ಮೇಲೆ ಬ್ರಿಟೀಷರು ವಿಧಿಸಿದ್ದ ನಿರ್ಬಂಧದ ವಿರುದ್ಧ ಜನರನ್ನು ಒಗ್ಗೂಡಿಸಿ ಹೋರಾಟಕ್ಕೆ ಪ್ರೇರೇಪಿಸಿದರು. ಇದು ಕ್ರಾಂತಿಗೆ ಕಾರಣವಾಯಿತು. ಆಗ ನಡೆದಿದ್ದೇ ಐತಿಹಾಸಿಕ ಪೈಕಾ ದಂಗೆ. ಜನರ ಒಗ್ಗಟ್ಟಿನ ಹೋರಾಟಕ್ಕೆ ಬ್ರಿಟೀಷರು ಕಂಗಾಲಾಗಿದ್ದರು.  ಮೊಹಪಾತ್ರ ಭ್ರಮರಬರ್ ರೇ ಪೈಕಾ ಕ್ರಾಂತಿಯ ರೂವಾರಿಯಾಗಿ ಮೂಡಿಬಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!