ದಕ್ಷಿಣ ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ಚಳವಳಿ ಯಶಸ್ವಿಗೊಳಿಸಿದ್ದ ವೈರಪ್ಪನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ವಿಶೇಷ)
22 ಮೇ 1906 ರಂದು ತಮಿಳುನಾಡಿನ ವೇದಾರಣ್ಯಂನಲ್ಲಿ ಕಲಿತೀತನ್ ಮತ್ತು ವೈರಮ್ಮಳ್ ದಂಪತಿಯ ಪುತ್ರನಾಗಿ ಜನಿಸಿದ ವೈರಪ್ಪನ್ ಮುಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಸರುವಾಸಿಯಾದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ಮಹಾತ್ಮ ಗಾಂಧಿಯವರ ನೀತಿಗಳು ಮತ್ತು ಸಿದ್ಧಾಂತಗಳ ಕುರಿತಾಗಿ ಆಳವಾದ ಆಸಕ್ತಿ ಹೊಂದಿದ್ದರು ಮತ್ತು ಸ್ವಾತಂತ್ರ್ಯ ಚಳುವಳಿಗಾರ ಸರ್ದಾರ್ ವೇದರತ್ನಂ ಪಿಳ್ಳೈ ಅವರಿಗೆ ನಿಕಟರಾಗಿದ್ದರು.
ಗಾಂಧೀಜಿಯವರು ಉತ್ತರಕ್ಕೆ ಉಪ್ಪಿನ ತೆರಿಗೆಯನ್ನು ಮುರಿಯುತ್ತಿದ್ದರೆ, ಅಗಸ್ತ್ಯಪಲ್ಲಿಯಲ್ಲಿ ವೈರಪ್ಪನ್ ಅವರು ದಕ್ಷಿಣದಲ್ಲಿ ಉಪ್ಪಿನ ಸತ್ಯಾಗ್ರಹವನ್ನು ನಡೆಸಿದರು. ವೈರಪ್ಪನ್‌ ಸ್ವಾತಂತ್ರ್ಯ ಹೋರಾಟಗಳನ್ನು ಗುರುತಿಸಿ 1972 ರಲ್ಲಿ  25 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಾಮ್ರ ಪಟ್ಟಾಯಂ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. ವೈರಪ್ಪನವರ ಕೊಡುಗೆಯನ್ನು ಗೌರವಿಸಿ 2010 ರಲ್ಲಿ ವೇದಾರಣ್ಯಂನಲ್ಲಿರುವ ಉಪ್ಪಿನ ಸತ್ಯಾಗ್ರಹ ಕಟ್ಟಡದಲ್ಲಿ ವೈರಪ್ಪನವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!