Thursday, August 18, 2022

Latest Posts

ಉದುಮ ಗ್ರಾಮ ಪಂಚಾಯತ್ ನಲ್ಲಿ ಜು.14ರ ವರೆಗೆ ತ್ರಿವಳಿ ಲಾಕ್ ಡೌನ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕಾಸರಗೋಡು:

ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಉದುಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜು.14ರ ವರೆಗೆ ತ್ರಿವಳಿ (ಟ್ರಿಪಲ್) ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಕೋವಿಡ್ ಜಾಗೃತಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯದ ಸಾಮಗ್ರಿ ಮಾರಾಟ ಸಂಸ್ಥೆಗಳು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಮಾತ್ರ ಚಟುವಟಿಕೆ ನಡೆಸಬಹುದು. ಈ ಸಂಸ್ಥೆಗಳ ಸಿಬ್ಬಂದಿಗಳು ಮಾಸ್ಕ್ , ಗ್ಲೌಸ್ ಕಡ್ಡಾಯವಾಗಿ ಧರಿಸಬೇಕು. ಕಟ್ಟುನಿಟ್ಟು ಆದೇಶ ಉಲ್ಲಂಘಿಸುವವರ ವಿರುದ್ಧ ವಾಹನ ವಶಪಡಿಸುವಿಕೆ, ಅಂಟುರೋಗ ನಿಯಂತ್ರಣ ಕಾಯಿದೆ, ದುರಂತ ನಿವಾರಣೆ ಕಾಯಿದೆ ಪ್ರಕಾರ ಕೇಸು ದಾಖಲಿಸಲಾಗುವುದು.
ಹೋಟೆಲ್ ಗಳು ಬೆಳಗ್ಗೆ 7 ರಿಂದ ರಾತ್ರಿ 7 ಗಂಟೆ ವರೆಗೆ ಪಾರ್ಸೆಲ್ ಸೇವೆಗಾಗಿ ಮಾತ್ರ ಚಟುವಟಿಕೆ ನಡೆಸಬಹುದು. ಔಷಧದ ಅಂಗಡಿಗಳು ಮತ್ತು ಪೆಟ್ರೋಲ್ ಪಂಪ್ ಗಳು ಸರಕಾರಿ ಆದೇಶ ಪ್ರಕಾರ ಮಾತ್ರ ಕಾರ್ಯಾಚರಿಸಬಹುದು. ಆಟೋ – ಟ್ಯಾಕ್ಸಿ ಸ್ಟಾಂಡ್ ಗಳಲ್ಲಿ ಚಟುವಟಿಕೆಗಳಿಗೆ ಅನುಮತಿಯಿಲ್ಲ. ಅಗತ್ಯದ ಸಾಮಗ್ರಿಗಳನ್ನು ತಮ್ಮ ಮನೆ ಬಳಿಯ ಅಂಗಡಿಗಳಿಂದಲೇ ಜನರು ಖರೀದಿಸಬೇಕು. ಸರಕಾರಿ ಸಂಸ್ಥೆಗಳು, ಬ್ಯಾಂಕ್ ಗಳೂ ಸರಕಾರಿ ನಿಬಂಧನೆಗಳಿಗನುಸಾರವಾಗಿ ಚಟುವಟಿಕೆ ನಡೆಸಬೇಕು.
ಪಂಚಾಯತ್ ನ 3, 5, 8 ನೇ ವಾರ್ಡ್ ಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಕಂಟೈನ್ ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಈ ವಾರ್ಡ್ ಗಳನ್ನು ಪೂರ್ಣರೂಪದಲ್ಲಿ ಮುಚ್ಚಲಾಗಿದೆ. ಇಲ್ಲಿಂದ ಜನರು ಬೇರೆಡೆಗೆ ತೆರಳುವುದು, ಬೇರೆಡೆಯಿಂದ ಇಲ್ಲಿಗೆ ಬರುವುದು ನಿಷೇಧಿಸಲಾಗಿದೆ. ಅಗತ್ಯದ ಸೇವೆಗಳಿಗೆ ವಾರ್ಡ್ ಮಟ್ಟದ ಜಾಗೃತಿ ಸಮಿತಿಯನ್ನು ಸ್ಥಳೀಯರು ಸಂಪರ್ಕಿಸಬೇಕು.
ಪಂಚಾಯತ್ ಮಟ್ಟದಲ್ಲಿ ಜನರು ಗುಂಪು ಸೇರುವುದು, ಆಟವಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಅಗತ್ಯದ ಸಾಮಗ್ರಿ ಮಾರಾಟ ಮಾಡುವ, ಮೀನು ಮಾಂಸ ಮಾರಾಟ ನಡೆಸುವ ಮಂದಿ 15 ದಿನಗಳ ಮುಂಚಿತವಾಗಿ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯವಾಗಿ ಪಡೆದಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!