Wednesday, August 10, 2022

Latest Posts

ಭಾರತೀಯ ರೈಲ್ವೆಯಿಂದ ‘ರಾಮಾಯಣ ಯಾತ್ರೆ’ ಅನಾವರಣ: ಇದರ ವಿಶೇಷತೆ ಏನು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಉತ್ತೇಜಿಸಲು ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಡಿಲಕ್ಸ್ ಎಸಿ ಪ್ರವಾಸಿ ರೈಲಿನ ಮೂಲಕ ಶ್ರೀರಾಮಾಯಣ ಯಾತ್ರೆ ಅನಾವರಣಗೊಳಿಸಿದೆ.
ದೇಖೋ ಅಪ್ಮಾ ದೇಶ್ ಎಂಬ ಕಾರ್ಯಕ್ರಮದ ಉಪಕ್ರಮ ಇದಾಗಿದೆ.

ನವೆಂಬರ್ 7 ರಿಂದ ಪ್ರವಾಸ ಆರಂಭವಾಗಲಿದ್ದು, 17 ದಿನಗಳು ಇರಲಿದೆ. ದೆಹಲಿಯ ಸಫ್ದರ್ ಜಂಗ್ ರೈಲ್ವೆ ನಿಲ್ದಾಣದಿಂದ ಪ್ರವಾಸ ಆರಂಭವಾಗಲಿದೆ. ಇಡೀ ರೈಲು ಯಾತ್ರೆ ಶ್ರೀರಾಮನ ಜೀವನದೊಂದಿಗೆ ಸಂಪರ್ಕ ಹೊಂದಿರುವ ಎಲ್ಲಾ ಪ್ರಮುಖ ಸ್ಥಳಗಳನ್ನು ಹೊಂದಿದೆ.

ಅಯೋಧ್ಯೆ ಮೊದಲ ನಿಲ್ದಾಣವಾಗಿದ್ದು, ಪ್ರವಾಸಿಗ ಮೊದಲು ಶ್ರೀರಾಮ ಜನ್ಮಭೂಮಿ ದೇವಾಲಯ ಮತ್ತು ಹನುಮಾನ್ ದೇವಾಲಯಕ್ಕೆ ಭೇಟಿ ನೀಡಬಹುದು. ಅಲ್ಲಿಂದ ಸೀತಾ ಜನ್ಮ ಸ್ಥಳ ಬಿಹಾರದ ಸಿತಮರ್ತಿ ಮತ್ತು ನೇಪಾಳದ ಜನಕ್‌ಪುರ ರಾಮ್- ಜಾನಕಿ ದೇವಾಲಯಕ್ಕೆ ತಲುಪಲಿದೆ. ಹೀಗೆಯೇ ಶ್ರೀರಾಮನಿಗೆ ಸಂಬಂಧಿಸಿದ ಎಲ್ಲ ಸ್ಥಳಗಳ ಪ್ರವಾಸ ನಂತರ 17 ನೇ ದಿನಕ್ಕೆ ರೈಲು ದೆಹಲಿಗೆ ಮರಳಲಿದೆ.

ರೈಲಿನ ವಿಶೇಷತೆ?

ಡಿಲಕ್ಸ್ ಎಸಿ ರೈಲಿನಲ್ಲಿ ಸಾಕಷ್ಟು ಸೌಕರ್ಯ ಹಾಗೂ ವಿಶಿಷ್ಟತೆಗಳಿವೆ. ಎರಡು ಉತ್ತಮ ರೆಸ್ಟೋರೆಂಟ್ಸ್, ಆಧುನಿಕ ಅಡುಗೆಮನೆ, ಶವರ್ ಕ್ಯುಬಿಕಲ್ಸ್, ಸೆನ್ಸಾರ್ ಆಧಾರಿತ ವಾಶ್‌ರೂಮ್, ಫುಟ್ ಮಸಾಜ್ ಕೂಡ ಇದೆ. ಸಿಸಿ ಕ್ಯಾಮೆರಾ, ಪ್ರತಿ ಬೋಗಿಗೆ ಭದ್ರತಾ ಸಿಬ್ಬಂದಿಯೂ ಇರಲಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss