ಯುಪಿ ಉಪಚುನಾವಣೆ: ಮುಸ್ಲಿಂ ಪ್ರಾಬಲ್ಯದ ರಾಂಪುರದಲ್ಲಿ ಗೆದ್ದು ಬೀಗಿದ ಬಿಜೆಪಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಇಂದು ಮೂರು ಲೋಕಸಭೆ ಹಾಗೂ ಏಳು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ ಉತ್ತರ ಪ್ರದೇಶದ ರಾಂಪುರದ ಲೋಕಸಭಾ ಕ್ಷೇತ್ರದದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಮುಸ್ಲಿಂ ಪ್ರಾಬಲ್ಯವುಳ್ಳ ರಾಂಪುರದಲ್ಲಿ ಇಲ್ಲಿಯವರೆಗೆ ಸಮಾಜವಾದಿ ಪಕ್ಷವೇ ಹೆಚ್ಚಿನ ಬಾರಿ ಗೆಲುವು ಸಾಧಿಸಿತ್ತು. ಆದ್ದರಿಂದ ಇದನ್ನು ಸಮಾಜವಾದಿ ಪಕ್ಷದ (ಎಸ್​ಪಿ) ಭದ್ರಕೋಟೆ ಎಂದೇ ಪರಿಗಣಿಸಲಾಗಿತ್ತು. ಇದೀಗ ಬಿಜೆಪಿಯ ಘನಶ್ಯಾಂ ಸಿಂಗ್​ ಲೋಧಿಯವರು ಎಸ್ಪಿಯ ಆಸಿಂ ರಾಜಾ ಅವರನ್ನು 42 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಅಜಂಗಢದಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ನಿರಾಹುವಾ ಅವರು ಮುನ್ನಡೆ ಸಾಧಿಸಿದ್ದಾರೆ. ಎಸ್‌ಪಿ ಅಭ್ಯರ್ಥಿ ಧರ್ಮೇಂದ್ರ ಯಾದವ್‌ಗಿಂತ ಇವರು ಮುಂದಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಕಡಿಮೆ ಮತದಾನದ ಪ್ರಮಾಣವು ರಾಮ್‌ಪುರ ಮತ್ತು ಅಜಂಗಢದಲ್ಲಿ ಲೋಕಸಭಾ ಉಪಚುನಾವಣೆಗಳಲ್ಲಿ ನಡೆದಿದೆ.
2019 ರ ಚುನಾವಣೆಯಲ್ಲಿ ಎಸ್​ಪಿ ಇವೆರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅಜಂಗಢದಲ್ಲಿ ಮತ್ತು ಹಿರಿಯ ನಾಯಕ ಅಜಂ ಖಾನ್ ರಾಂಪುರದಲ್ಲಿ ಗೆದ್ದಿದ್ದರು. ಇತ್ತೀಚೆಗಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!