ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಉತ್ತರಪ್ರದೇಶದಲ್ಲಿ ಬಹುಜನಸಮಾಜ ಪಕ್ಷದ ಅಮಾನತುಗೊಂಡ ಐವರು ಶಾಸಕರು ಸಮಾಜವಾದಿ ಪಕ್ಷ (ಎಸ್ಪಿ)ದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಮಂಗಳವಾರ ಭೇಟಿ ಮಾಡುವುದರೊಂದಿಗೆ ಅವರನ್ನು ಸಮಾಜವಾದಿ ಪಕ್ಷ ಸೆಳೆದಿರುವುದು ಸ್ಪಷ್ಟವಾದಂತಾಗಿದೆ.
ಈ ಐವರು ಶಾಸಕರು ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದು ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 15-20ನಿಮಿಷಗಳ ಕಾಲ ಮಾತುಕತೆ ನಡೆಯಿತು. ಇದೊಂದು ಉತ್ತಮ ಭೇಟಿಯಾಗಿತ್ತು ಎಂಬುದಾಗಿ ಮುಂಗ್ರಾ ಬಾದ್ಶಹಪುರ್ ವಿಧಾನಸಭಾ ಕ್ಷೇತ್ರದ ಶಾಸಕಿ ಸುಷ್ಮಾ ಪಟೇಲ್ ಬಣ್ಣಿಸಿದರು.
ನಿಮ್ಮ ಮುಂದಿನ ನಡೆ ಏನು ಎಂಬುದಾಗಿ ಅವರನ್ನು ಕೇಳಿದಾಗ , ನಾನು ವೈಯಕ್ತಿಕವಾಗಿ ಸಮಾಜವಾದಿ ಪಕ್ಷ ಸೇರಲು ಮನಸ್ಸು ಮಾಡಿದ್ದೇನೆ ಎಂದು ಆಕೆ ಹೇಳಿದರು.ಈ ನಡುವೆ , ಈ ಐವರು ಬಿಎಸ್ಪಿ ಶಾಸಕರನ್ನು ಎಸ್ಪಿಯೆಡೆಗೆ ಸೆಳೆದು ತರಲು ಮಾತುಕತೆಗಳು ನಡೆದಿರುವುದಾಗಿ ಮೂಲಗಳು ತಿಳಿಸಿವೆ. 403 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ ಬಿಎಸ್ಪಿ18 ಶಾಸಕರನ್ನು ಹೊಂದಿದ್ದು, ಬಿಎಸ್ಪಿಯ ಕೆಲವು ನಾಯಕರು ಬಿಜೆಪಿ ವಿರುದ್ಧ ಹೇಳಿಕೆಗಳನ್ನು ನೀಡಲಾರಂಭಿಸಿರುವಾಗಲೇ ಬಿಎಸ್ಪಿ ಶಾಸಕರನ್ನು ಸೆಳೆಯಲು ಎಸ್ಪಿ ನಡೆಸುತ್ತಿರುವ ಯತ್ನಗಳು ಗಮನ ಸೆಳೆದಿವೆ.