ಈ ಪರುಶುರಾಮ ಸರ್ಕೀಟ್‌ ಮೂಲಕ 5 ತೀರ್ಥಯಾತ್ರಾ ಸ್ಥಳಗಳನ್ನು ಸಂಪರ್ಕಿಸುತ್ತಿದೆ ಯುಪಿ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಐದು ಪವಿತ್ರ ತೀರ್ಥಯಾತ್ರಾ ಕ್ಷೇತ್ರಗಳನ್ನು ಸಂಪರ್ಕಿಸುವ ಮಹತ್ವದ ಪರಶುರಾಮ ಸರ್ಕೀಟ್‌ ಯೋಜನೆ ನಿರ್ಮಾಣಕ್ಕೆ ಉತ್ತರ ಪ್ರದೇಶ ಸರ್ಕರ ಮುಂದಾಗಿದೆ. ಇದು ಪರಶುರಾಮ ತೀರ್ಥಯಾತ್ರೆಗೆ ಅನುಕೂಲ ಮಾಡಿಕೊಡಲಿದೆ.ಲೋಕೋಪಯೋಗಿ ಇಲಾಖೆ (PWD) ಇಲಾಖೆಯ ಅಡಿಯಲ್ಲಿ ಉತ್ತರ ಪ್ರದೇಶದ ಆರು ಜಿಲ್ಲೆಗಳಲ್ಲಿ ಐದು ತೀರ್ಥಯಾತ್ರೆಗಳನ್ನು ಸಂಪರ್ಕಿಸುವ 500-ಕಿಮೀ ಉದ್ದದ ಕಾರಿಡಾರ್ ನಿರ್ಮಿಸಲು ಚಿಞಮತನೆ ನಡೆಸಲಾಗಿದೆ.

ಅಂದಾಜು 5,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಚಿಂತಿಸಲಾಗಿದೆ. ಪರಶುರಾಮ ಸರ್ಕ್ಯೂಟ್ ಜೊತೆಗೆ, ರಾಜ್ಯವು ಈಗಾಗಲೇ ಅಯೋಧ್ಯೆ 84 ಕೋಸಿ ಮಾರ್ಗ, ಬುದ್ಧ ಮತ್ತು ರಾಮಾಯಣ ಸರ್ಕ್ಯೂಟ್ ಸೇರಿದಂತೆ ಹಲವಾರು ಧಾರ್ಮಿಕ ಸರ್ಕ್ಯೂಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪರಶುರಾಮ್ ಸರ್ಕ್ಯೂಟ್ ಹಿಂದೂಗಳ ನಂಬಿಕೆಯ ಕೇಂದ್ರವಾದ ನೈಮಿಶ್ ಧಾಮ್, ಮಹರ್ಷಿ ದಧೀಚಿ ಸ್ಥಳ ಮಿಶ್ರಿಖ್, ಗೋಲಗೋಕರ್ನಾಥ, ಗೋಮತಿ ಉದ್ಗಮ್, ಪೂರ್ಣಗಿರಿ ಮಾ ದೇವಾಲಯದ ಗಡಿಯನ್ನು ಬಾಬಾ ನೀಮ್ ಕೊರೋರಿ ಧಾಮ್ ಮತ್ತು ಜಲಾಲಾಬಾದ್ ಪರಶುರಾಮನ ಜನ್ಮಸ್ಥಳದೊಂದಿಗೆ ಸಂಪರ್ಕಿಸುತ್ತದೆ. ಸೀತಾಪುರ್, ಲಖಿಂಪುರ, ಪಿಲಿಭಿತ್, ಬರೇಲಿ, ಶಹಜಹಾನ್‌ಪುರ ಮತ್ತು ಫರೂಕಾಬಾದ್ ಈ ಆರು ಜಿಲ್ಲೆಗಳಲ್ಲಿ ಈ ಕಾರಿಡಾರ್‌ ಹಾದುಹೋಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದ ಸಹಯೋಗದಲ್ಲಿ ಈ ಕಾರಿಡಾರ್‌ ನಿರ್ಮಿಸಲು ಚಿಂತಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!