ಮುಸ್ಲಿಂ ಯುವಕರಿಗೆ ಹನುಮಾನ್‌ ಚಾಲೀಸಾ ಬೋಧಿಸಿದ ಹಿಂದೂ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಂದೂ ವ್ಯಕ್ತಿಯೊಬ್ಬ ಮುಸ್ಲಿಮರಿಗೆ ಹನುಮಾನ್ ಚಾಲೀಸಾ ಕುರಿತು ಬೋಧಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಚಾಲೀಸಾ ಬೋಧಿಸುತ್ತಿರುವ ಉತ್ತರ ಪ್ರದೇಶದ ಅಲಿಗಢದ ಯುವಕನನ್ನು ಸಚಿನ್ ಶರ್ಮಾ ಎಂದು ಗುರುತಿಸಲಾಗಿದೆ. ಹಸ್ತಪುರ ಗ್ರಾಮದ ದೇವಾಲಯವೊಂದರಲ್ಲಿ ಚಿತ್ರಿಸಲಾಗಿರುವ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮ ಮತ್ತು ಧಾರ್ಮಿಕ ಬೋಧನೆಗಳ ಬಗೆಗಿನ ತೀವ್ರವಾದ ಚರ್ಚೆಗೆ ಕಾರಣವಾಗಿದೆ.0 ವೀಡಿಯೊದಲ್ಲಿ, ಕುತ್ತಿಗೆಯಲ್ಲಿ ಕಿತ್ತಳೆ ಸ್ಕಾರ್ಫ್ ಧರಿಸಿರುವ ಹಿಂದೂ ವ್ಯಕ್ತಿಯೊಬ್ಬರು ಕುಳಿತುಕೊಂಡು ಹನುಮಾನ್ ಚಾಲೀಸಾವನ್ನು ಪಠಿಸುತ್ತಿದ್ದಾರೆ. ಅವನ ಸುತ್ತ ಕುಳಿತ ಮುಸಲ್ಮಾನ ಯುವಕರು ಆತನ ಮಾತನ್ನು ಗಮನವಿಟ್ಟು ಕೇಳುತ್ತಿದ್ದಾರೆ. ಗುಂಪು ಹನುಮಾನ್ ದೇವಾಲಯದ ಒಳಗೆ ಕುಳಿತಿದೆ ಎಂದು ತೋರುತ್ತದೆ. ಸಚಿನ್ ಶರ್ಮಾ ಅವರು ಅಲಿಗಢದಲ್ಲಿ ಅಖಿಲ ಭಾರತ ಹಿಂದೂ ಸೇನೆಯ ಜಿಲ್ಲಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಈ ವಿಡಿಯೋದ ಬಗ್ಗೆ ಸಚಿನ್ ಶರ್ಮಾ ಅವರನ್ನು ಕೇಳಿದಾಗ, ಸನಾತನ ಧರ್ಮದ ಬಗ್ಗೆ ಇತರ ಸಮುದಾಯಗಳಿಗೆ ಅರಿವು ಮೂಡಿಸಲು ನಾನು ಈ ಕಾರ್ಯವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಆದರೆ ವೀಡಿಯೊಗೆ ಸಂಬಂಧಿಸಿದಂತೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಸುನ್ನಿ ಥಿಯಾಲಜಿ ವಿಭಾಗದ ಮಾಜಿ ಮುಖ್ಯಸ್ಥ ಮತ್ತು ಮುಸ್ಲಿಂ ಧಾರ್ಮಿಕ ವ್ಯಕ್ತಿ ಮುಫ್ತಿ ಜಾಹಿದ್ ಅಲಿ ಅವರು ಕಿಡಿಕಾರಿದ್ದಾರೆ. ಹನುಮಾನ್ ಚಾಲೀಸಾವನ್ನು ಮುಸ್ಲಿಮರ ಮುಂದೆ ಓದುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ. ಹಿಂದೂಗಳಿಗೆ ಅಥವಾ ಮುಸ್ಲಿಮರೆಂದು ಗುರುತಿಸಿಕೊಳ್ಳುವವರಿಗೆ ಹನುಮಾನ್‌ ಚಾಲೀಸಾ ಕೇಳುವ ಬಗ್ಗೆ ಯಾವುದೇ ನಿರ್ಬಂಧಗಳಿಲ್ಲದಿದ್ದರೂ, ಇತರ ಸಮುದಾಯಗಳ ಸದಸ್ಯರ ಮೇಲೆ ಅದನ್ನು ಹೇರುವುದು ಅಸಂವಿಧಾನಿಕ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!