Saturday, March 25, 2023

Latest Posts

ನಂದಿಬೆಟ್ಟದಲ್ಲಿ ಉಪೇಂದ್ರ ಅಭಿಮಾನಿ ಆತ್ಮಹತ್ಯೆ, ಈಸಬೇಕು ಇದ್ದು ಜೈಸಬೇಕು ಎಂದ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಂದಿಬೆಟ್ಟದಲ್ಲಿ ಯುವಕನೊಬ್ಬ ಟಿಪ್ಪುಡ್ರಾಪ್‌ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಸಂಜೆ ಮೃತದೇಹ ಪತ್ತೆಯಾಗಿದ್ದು, ಆತ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಂಡ್ಯ ಮೂಲದ ಉಪೇಂದ್ರ ಅಭಿಮಾನಿ ಅರುಣ್ ಟಿಪ್ಪು ಡ್ರಾಪ್‌ಗೆ ತೆರಳಿದ್ದಾನೆ. ಬೈಕ್ ಪಾರ್ಕ್ ಮಾಡಿ, ಹೆಲ್ಮೆಟ್ ಲಾಕ್‌ರೂಮ್‌ನಲ್ಲಿ ಇಟ್ಟಿದ್ದಾರೆ. ಬೆಟ್ಟಕ್ಕೆ ಹೋದವರು ವಾಪಾಸ್ ಬರದ ಕಾರಣ ಹೆಲ್ಮೆಟ್ ಲಾಕರ್ ರೂಂ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ರಾಜಕೀಯ ವ್ಯವಸ್ಥೆ ಸರಿ ಇಲ್ಲ, ಎಲ್ಲರೂ ಪ್ರಜಾಕೀಯಕ್ಕೆ ಬೆಂಬಲ ಕೊಡಿ, ನಾನು ಖುಷಿಯಲ್ಲಿ ಪ್ರಾಣ ಬಿಡುತ್ತಿದ್ದೇನೆ ಎಂದು ಬರೆದಿದ್ದಾರೆ.

ಇದರ ಬಗ್ಗೆ ಉಪೇಂದ್ರ ಕೂಡ ಮಾತನಾಡಿದ್ದು, ಈಸಬೇಕು, ಇದ್ದು ಜೈಸಬೇಕು, ಬದುಕಿ ಬಾಳಬೇಕಾದವರು ಹೀಗೆ ಆತ್ಮಹತ್ಯೆ ಮಾಡಿಕೊಂಡರೆ ಹೇಗೆ? ಏನೇ ಆದರೂ ಬದುಕುವ ಛಲ ಇದ್ದೇ ಇರಬೇಕು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!