spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಇಂಟರ್ನೆಟ್ ದಟ್ಟಣೆ ತಗ್ಗಿಸಲು ಇನ್ಮುಂದೆ 50 ರೂಪಾಯಿ ಒಳಗಿನ ಗೇಮಿಂಗ್ ವ್ಯವಹಾರಕ್ಕೆ ಯುಪಿಐ ನಿಷೇಧ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಇನ್ಮುಂದೆ 50 ರೂಪಾಯಿ ಒಳಗಿನ ಗೇಮಿಂಗ್ ವ್ಯವಹಾರಕ್ಕೆ ಯುಪಿಐ ನಿಷೇಧ ಹೇರಲು ಮುಂದಾಗಿದೆ.
ಆನ್ಲೈನ್ ಗೇಮ್ ಅಪ್ಲಿಕೇಷನ್ ಗಳಿಗೆ ಯುಪಿಐ ಮೂಲಕ ಹಣ ಪಾವತಿಸುವ ವ್ಯವಸ್ಥೆ ಮೇಲೆ ಕಡಿವಾಣ ಹಾಕಲು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್(NPCI) ಇಂತಹ ಕ್ರಮ ಕೈಗೊಳ್ಳಲು ಮುಂದಾಗಿದೆ.
ಆನ್ಲೈನ್ ಆಪ್ ಗಳಿಗೆ ಭಾರಿ ಪ್ರಮಾಣದ ಹಣ ಪಾವತಿ ಮಾಡುವುದರಿಂದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(UPI) ವ್ಯವಸ್ಥೆ ಮೇಲೆ ಭಾರೀ ಒತ್ತಡ ಉಂಟಾಗುತ್ತಿದೆ. ಜೊತೆಗೆ ಇಂಟರ್ನೆಟ್ ದಟ್ಟಣೆ ಹೆಚ್ಚಾಗಿ ಯುಪಿಐ ವ್ಯವಸ್ಥೆಯಲ್ಲಿ ಹಲವು ಸಲ ವ್ಯತ್ಯಯವಾಗುತ್ತಿದೆ. ಇದನ್ನು ಕಡಿಮೆ ಮಾಡಿ ಯುಪಿಐ ವ್ಯವಸ್ಥೆ ರಕ್ಷಿಸಿಕೊಳ್ಳಲು ಗೇಮಿಂಗ್ ಅಪ್ಲಿಕೇಷನ್ ಗಳಿಗೆ 50 ರೂಪಾಯಿಗಿಂತ ಕಡಿಮೆ ಮೊತ್ತದ ಹಣ ಪಾವತಿ ಮಾಡುವುದನನ್ನು ಯುಪಿಐ ವ್ಯವಸ್ಥೆ ಮೂಲಕ ಪಾವತಿಗೆ ನಿರಾಕರಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಮುಂದಾಗಿದೆ.
ಇದರ ಬದಲಿಗೆ ಗೇಮಿಂಗ್ ಆಪ್ ಗಳನ್ನು ಸ್ಟಾಂಡಿಂಗ್ ಇನ್ಸ್ಟ್ರಕ್ಷನ್ ಆಧಾರಿತವಾಗಿ ಪಾವತಿ ವ್ಯವಸ್ಥೆಗಳಾದ ನೆಟ್ ಬ್ಯಾಂಕಿಂಗ್ ಮೂಲಕ ಬಳಸಿಕೊಳ್ಳಬಹುದು.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap