spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ ಇಂಟರ್ನೆಟ್ ಇಲ್ಲದೆಯೇ UPIನಿಂದ ಹಣ ಪಾವತಿ ಮಾಡ್ಬೋದು!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಹೆಚ್ಚು ಬಳಕೆಯಾಗುತ್ತಿರುವ ಡಿಜಿಟಲ್ ವ್ಯವಹಾರಗಳ ಮೂಲಕ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ.
ಯುಪಿಐ ಮೂಲಕ ಹಣ ಪಾವತಿ ಮಾಡುವುದನ್ನು ಮತ್ತಷ್ಟು ಸುಲಭಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಇನ್ಮುಂದೆ ಇಂಟರ್ನೆಟ್ ಇಲ್ಲದೆಯೇ ಫೋನ್ ಪೇ, ಗೂಗಲ್ ಪೇ ಸೇರಿದಂತೆ ಯಾವುದೇ ಆಪ್ ಗಳ ಮೂಲಕ ಹಣ ಪಾವತಿ ಮಾಡುವ ಬಗ್ಗೆ ಆರ್ ಬಿಐ ಚಿಂತನೆ ನಡೆಸಿದೆ.
ದೇಶದಲ್ಲಿ ಯುಪಿಐ ವಹಿವಾಟು ಅತಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಸಣ್ಣ ಮೊತ್ತವನ್ನು ಪಾವತಿ ಮಾಡಲು ಇದು ಸಹಕಾರಿಯಾಗಲಿದೆ. ಬಳಕೆದಾರರಿಗೆ ಯುಪಿಐ ಫೀಚರ್ ಸರಳವಾಗಲು ಈ ಸೇವೆಯ ಉದ್ದೇಶವಾಗಿದೆ. ಶೀಘ್ರದಲ್ಲೇ ಈ ಹೊಸ ಫೀಚರ್ ಲೋಕಾರ್ಪಣೆಗೊಳ್ಳುವ ನಿರಿಕ್ಷೆ ಇದೆ.
ಈ ಮೂಲಕ ದೇಶದಲ್ಲಿ ಹಣ ಪಾವತಿಗೆ ಆಟೋಪೇ ವ್ಯವಸ್ಥೆ ಮಾಡಲಾಗಿದ್ದು, ಹಣಕಾಸು ಮಾರುಕಟ್ಟೆಯಲ್ಲಿ ಯುಪಿಐ ಬಳಕೆಯನ್ನು ಸುಲಭಗೊಳಿಸುವುದು ಮತ್ತು ಪೂರೈಕೆದಾರರ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಯುಪಿಐ ಆಧಾರಿತ ಪಾವತಿಯ ಉದ್ದೇಶವಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss