Saturday, April 1, 2023

Latest Posts

ವರದಕ್ಷಿಣೆ ವಿಚಾರದಲ್ಲಿ ಗಲಾಟೆ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಹೊಸದಿಗಂತ ವರದಿ, ಕಲಬುರಗಿ:

ನಗರದ ತಾರಫೈಲ್ ಬಡವಾಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೋರ್ವಳ ಶವವು ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

ತಾರಫೈಲ್ ಬಡಾವಣೆಯ ನಿವಾಸಿ ಸುಜಾತ (34) ಎಂಬುವರ ಶವ ಪತ್ತೆಯಾಗಿದೆ. ಎಂಟು ವರ್ಷಗಳ ಹಿಂದೆ ಭೀಮಣ್ಣಾ ಎಂಬುವನ ಜೊತೆ ಸುಜಾತ ಪ್ರೀತಿಸಿ ಮದುವೆಯಾಗಿದ್ದರು.

ಮದುವೆಯಾದ ಬಳಿಕ ಗಂಡ ಹೆಂಡತಿ ವರದಕ್ಷಿಣೆ ವಿಚಾರಕ್ಕೆ ಜಗಳವಾಡುತ್ತಿದರು. ಶನಿವಾರ ಕೂಡ ಭೀಮಣ್ಣಾ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಗಲಾಟೆಯ ಬಳಿಕ ಸುಜಾತ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವ ಆರೋಪ ಈದೀಗ ಕೇಳಿಬಂದಿದೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!