Saturday, July 2, 2022

Latest Posts

ನಗರ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಫಲಿತಾಂಶದ ಬಗ್ಗೆ ಮುಖ್ಯಮಂತ್ರಿ ಏನಂದ್ರು?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಈಗ ನಡೆದಿರುವ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಳೆದ ಬಾರಿಗಿಂತ ನಮ್ಮ ಪರ್ಫಾಮೆನ್ಸ್ ಚೆನ್ನಾಗಿದೆ. ಆದರೆ ಇನ್ನಷ್ಟು ಚೆನ್ನಾಗಿ ಆಗಬೇಕಿತ್ತು. ಅಲ್ಪ ಸಂಖ್ಯಾತರು ಜಾಸ್ತಿ ಇರುವ ಹಲವಾರು ಕಡೆಗಳಲ್ಲಿ ಬಹಳ ಪ್ರಯತ್ನ ಮಾಡಿದರೂ ನಮಗೆ ಯಶಸ್ಸು ಸಿಗುತ್ತಿರಲಿಲ್ಲ. ಈ ಸಲ ವಿಶೇಷ ಪ್ರಯತ್ನದಿಂದಾಗಿ ಯಶಸ್ಸು ಸಿಕ್ಕಿದೆ. ಯಾವುದೇ ಭೇದ ಭಾವವಿಲ್ಲದೇ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತೇವೆ- ಇದು ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಯಾವತ್ತು ಗೆದ್ದಿಲ್ಲ. ಈ ಪ್ರದೇಶದಲ್ಲಿ ಶೇ. 65ರಷ್ಟು ಅಲ್ಪ ಸಂಖ್ಯಾತರಿದ್ದಾರೆ. ಆದರೂ ನಾವು ಅಭಿವೃದ್ಧಿಯನ್ನು ನಿಲ್ಲಿಸಿಲ್ಲ. ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುತ್ತೇವೆ ಎಂದರು.

“ಇವತ್ತು ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿದೆ. ಪಟ್ಟಣ ಪಂಚಾಯತ್‌ಗಳಲ್ಲಿಯೂ ನಾವೇ ಬಂದಿದ್ದೇವೆ. ಅವರು ಯಾವುದೇ ನಾಲ್ಕೈದು ನಗರಸಭೆಗಳ ಅಲ್ಪಸಂಖ್ಯಾತರ ವಾರ್ಡ್‌ಗಳಲ್ಲಿ ಜಾಸ್ತಿ ಮತಗಳಿಸಿ ಕಾಂಗ್ರೆಸ್ಸಿನವರು ಬೀಗುವುದು ಬೇಡ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು, ಕನಸು ಕಾಣುವುದಕ್ಕೆ ದುಡ್ಡು ಕೊಡಬೇಕಾಗಿಲ್ಲ, ತೆರಿಗೆ ಕಟ್ಟಬೇಕಾಗಿಲ್ಲ. ಕನಸು ಕಾಣಲಿ, ಅವರ ಕನಸು ಕನಸಾಗಿಯೇ ಉಳಿಯುತ್ತದೆ” ಎಂದು ಕುಟುಕಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss