Friday, July 1, 2022

Latest Posts

ಅನುಮತಿ ಇಲ್ಲದ ಅಂಗಡಿಗಳ ಬಂದ್, ರಸ್ತೆಗಿಳಿದ ಆಟೋಗಳಿಗೆ ದಂಡ

ಹೊಸ ದಿಗಂತ ವರದಿ, ಕೋಲಾರ:

ನಗರದಲ್ಲಿ ಶುಕ್ರವಾರ ಬೆಳಗ್ಗೆ ನಗರ ಸಂಚಾರ ನಡೆಸಿದ ವಿಭಾಗಾಧಿಕಾರಿ ಸೋಮಶೇಖರ್ ಹಾಗೂ ತಹಸೀಲ್ದಾರ್ ಶೋಭಿತಾ ಅನುಮತಿ ಇಲ್ಲದೇ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಿದರಲ್ಲದೇ ರಸ್ತೆಗಿಳಿದಿದ್ದ ಆಟೋಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ಜನತಾ ಕರ್ಫ್ಯೂ ನಡುವೆಯೂ ಸೋಂಕಿತರ ಸಂಖ್ಯೆ ಕಡಿಮೆಯಾಗದ ಕಾರಣ ಜಿಲ್ಲಾಡಳಿತ ಮತ್ತಷ್ಟು ಕಠಿಣ ನಿಲುವು ತಡೆಯಲು ಮುಂದಾಗಿರುವ ಸೂಚನೆ ಎಂಬಂತೆ ಬೆಳಗ್ಗೆ 9 ಗಂಟೆಗೆ ಅಂಗಡಿಗಳನ್ನು ಮುಚ್ಚಿಸಿ, ಕೋವಿಡ್ ಮಾರ್ಗಸೂಚಿ ಪಾಲಿಸದ ಅಂಗಡಿಗಳ ವಿರುದ್ದ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ನಗರದ ಕಾಳಮ್ಮಗುಡಿ ರಸ್ತೆ, ಅಮ್ಮವಾರಿಪೇಟೆ, ಎಂಜಿ ರಸ್ತೆಗಳಲ್ಲಿ ಸಂಚರಿಸಿದ ಅಧಿಕಾರಿಗಳು ದಿನಸಿ,ತರಕಾರಿ,ಹಾಲು, ಮೆಡಿಕಲ್ ಸ್ಟೋರ‍್ಸ್ ಹೊರತು ಪಡಿಸಿ ಅನುಮತಿ ಇಲ್ಲದೆ ಅಂಗಡಿಗಳನ್ನು ತೆರೆದು ವಹಿವಾಟು ನಡೆಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಕೆಲವು ಅಂಗಡಿ ಮಾಲೀಕರು ಅಧಿಕಾರಿಗಳು ಬರುತ್ತಿದ್ದನ್ನು ಕಂಡು ತರಾತುರಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿದರು.
ಇದೇ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ ತಹಸೀಲ್ದಾರ್, ರಸ್ತೆಗಳಿದ ಆಟೋಗಳಿಗೆ ದಂಡ ವಿಧಿಸಿದ ಖಡಕ್ ವಾರ್ನಿಂಗ್ ನೀಡಿದರು.
ಇದೇ ಸಂದರ್ಭದಲ್ಲಿ ಅಮ್ಮವಾರಿಪೇಟೆಯಲ್ಲಿ ಸಾಮಾಜಿಕ ಅಂತರ ಮರೆತು ವ್ಯಾಪಾರ ವಾಹಿವಾಟು ಮಾಡುತ್ತಿದ್ದ ಅಂಗಡಿಗಳಿಗೆ ಬೀಗ ಜಡಿದು ಮತ್ತೊಮ್ಮೆ ವಹಿವಾಟು ನಡೆಸಿದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು. ಈ ಸಂದರ್ಭ  ಪಿಎಸ್‌ಐ ಅಣ್ಣಯ್ಯ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss