ಉರ್ಫಿ ಜಾವೇದ್​ ಕೇಸ್: ಮುಂಬೈ ಪೊಲೀಸರಿಂದ ನಟಿಯ ವಿಚಾರಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೋಲ್ಡ್​ ಬಟ್ಟೆಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿರುವನಟಿ ಉರ್ಫಿ ಜಾವೇದ್​ (Urfi Javed) ಗೆ ಸಂಕಷ್ಟ ಎದುರಾಗಿದೆ.
ತಮ್ಮ ಬೋಲ್ಡ್​ ಬಟ್ಟೆಯೇ ಇದೀಗ ಅವರಿಗೆ ಮುಳ್ಳುವಾಗಿದ್ದು, ವಿಚಾರಕ್ಕೆ ಪೊಲೀಸ್​ ಠಾಣೆ ಮೆಟ್ಟಿಲೇರುವಂತಾಗಿದೆ.

ಉರ್ಫಿ ಜಾವೇದ್​ ಅವರನ್ನು ಮುಂಬೈ ಪೊಲೀಸರು (Mumbai Police)2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಪೊಲೀಸ್​ ಆಯುಕ್ತರ ಆದೇಶದ ಮೇರೆಗೆ ಮುಂಬೈನ ಅಂಬೋಲಿ ಠಾಣೆಯ ಪೊಲೀಸರು ಉರ್ಫಿ ಜಾವೇದ್​ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರದ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರಾ ಕಿಶೋರ್​ ವಾಘ್​ ಅವರು ಉರ್ಫಿ ಜಾವೇದ್​ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾರ್ವಜನಿಕ ಸ್ಥಳದಲ್ಲಿ ಅರೆ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಅದರ ಬೆನ್ನಲ್ಲೇ ಪೊಲೀಸರು ಉರ್ಫಿ ಜಾವೇದ್​ಗೆ ನೋಟಿಸ್​ ನೀಡಿ, ವಿಚಾರಣೆಗೆ ಬರುವಂತೆ ಸೂಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!