ಅಯ್ಯೋ…ಉರ್ಫಿ ಏನಾಯ್ತು, ಅವರೂ ಬರಬೇಡಿ ಅಂದ್ರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಗ್ ಬಾಸ್ ಕಾರ್ಯಕ್ರಮದ ನಂತರ ಉರ್ಫಿ ಜಾವೇದ್ ಸದಾ ಸುದ್ದಿಯಲ್ಲಿರುತ್ತಾರೆ. ಅತಿ ಕಡಿಮೆ ಅವಧಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಫಾಲೋವರ್ಸ್ ಗಳಿಸಿದ್ದಾರೆ. ಉರ್ಫಿ ಜಾವೇದ್ ಅಭಿಮಾನಿಗಳಷ್ಟೇ ವಿಮರ್ಶಕರನ್ನೂ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಉರ್ಫಿ ಜಾವೇದ್ ಕೈಯಲ್ಲಿ ಉಪಹಾರದ ತಟ್ಟೆ ಜೊತೆಗೆ ಶರ್ಟ್ ಲೆಸ್ ಫೋಟೋ ಶೂಟ್ ಮಾಡಿದ್ದಾಳೆ ಈ ವಿಡಿಯೋವನ್ನು ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕೆ ಸಖತ್‌ ಟ್ರೋಲ್‌ ಆಗಿದ್ದರು.

ಈ ಹಿಂದೆಯೂ ಉರ್ಫಿ ಜಾವೇದ್‌ಗೆ ತನ್ನ ಡ್ರೆಸ್‌ನಿಂದಾಗಿ ಕೊಲೆ ಬೆದರಿಕೆಗಳು ಬಂದಿದ್ದವು. ಆದರೆ ಆ ಬೆದರಿಕೆಗಳು ಉರ್ಫಿ ಜಾವೇದ್ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಇತ್ತೀಚೆಗೆ, ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿರುವ ರೆಸ್ಟೊರೆಂಟ್ ತನ್ನ ಉಡುಗೆಯ ಕಾರಣದಿಂದ ತನಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.

ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ,  “ನೀವು ನನ್ನನ್ನು ಇಷ್ಟಪಡದಿದ್ದರೆ ಬೇಡ, ನನ್ನನ್ನು ನಿರ್ಲಕ್ಷಿಸಿ. ನಾವು ಪ್ರಸ್ತುತ 21 ನೇ ಶತಮಾನದಲ್ಲಿ ವಾಸಿಸುತ್ತಿದ್ದೇವೆ. ನನ್ನ ಡ್ರೆಸ್‌ನ ಕಾರಣದಿಂದ ನನಗೆ ರೆಸ್ಟೋರೆಂಟ್‌ಗೆ ಹೋಗಲು ಅವಕಾಶ ನೀಡಲಿಲ್ಲ. ನಾನು ನಿಜವಾಗಿಯೂ ಮುಂಬೈನಲ್ಲಿದ್ದೇನೆಯೇ? ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತದೆ. ನಿಮಗೆ ನನ್ನ ಫ್ಯಾಷನ್ ಇಷ್ಟವಾಗದಿದ್ದರೂ ಪರವಾಗಿಲ್ಲ…ಆದರೆ ನನ್ನನ್ನು ಹಾಗೆ ನೋಡುವುದು ತಪ್ಪು”. ಉರ್ಫಿ ಜಾವೇದ್ ಈ ಪೋಸ್ಟ್‌ ಅನ್ನು ನೇರವಾಗಿ Zomato ಗೆ ಟ್ಯಾಗ್ ಮಾಡಿದ್ದಾರೆ. ಇದೀಗ ನೆಟ್ಟಿಗರು ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಹಲವರು ಉರ್ಫಿ ಜಾವೇದ್ ಅವರನ್ನು ಬೆಂಬಲಿಸುತ್ತಿದ್ದಾರೆ. ರೆಸ್ಟೋರೆಂಟ್ ಸರಿಯಾದ ನಿರ್ಧಾರವನ್ನು ಮಾಡಿದೆ ಎಂದು ಇತರರು ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!