ತಂಡ ಸೋತ ಸಿಟ್ಟಿಗೆ ಸಿಡ್ನಿ ಕ್ರಿಕೆಟ್‌ ಗ್ರೌಂಡ್ ನೊಳಗೆ ಮೂತ್ರ ವಿಸರ್ಜಿಸಿದ ಹುಚ್ಚು ಅಭಿಮಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತನ್ನ ನೆಚ್ಚಿನ ತಂಡ ಸೋತ ಸಿಟ್ಟಿಗೆ ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ ನಲ್ಲಿ ಅಸಭ್ಯ ವರ್ತನೆ ಪ್ರದರ್ಶಿಸಿದ್ದ  ಅಭಿಮಾನಿಯೊಬ್ಬನಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ.
ಎಸ್‌ಸಿಜಿ ಕ್ರೀಡಾಂಗಣದಲ್ಲಿ ನಡೆದ ರಗ್ಬಿ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ. ಈ ಕ್ರೀಡಾಂಗಣವು ಕ್ರಿಕೆಟ್‌ ಜೊತೆಗೆ ರಗ್ಬಿ ಕ್ರೀಡೆಗೂ ಸಹ ಆತಿಥ್ಯ ವಹಿಸುತ್ತದೆ. ಪ್ರವಾಸಿ ಇಂಗ್ಲೆಂಡ್ ತಂಡದ ತವರಿನಲ್ಲೇ ಆಸ್ಟ್ರೇಲಿಯದ ಸೋಲು ಕಂಡಿದ್ದರಿಂದ ಆಕ್ರೋಶಗೊಂಡ ಅಭಿಮಾನಿಯೊಬ್ಬ ಗ್ರ್ಯಾಂಡ್‌ ಸ್ಟ್ಯಾಂಡ್‌ನ ಮೇಲ್ಛಾವಣಿಗೆ ಹತ್ತಿ ಇತರ ಅಭಿಮಾನಿಗಳು ನೋಡುತ್ತಿರುವಂತೆಯೇ ಕೆಳಕ್ಕೆ ಮೂತ್ರ ವಿಸರ್ಜಿಸಿದ್ದ. ತಕ್ಷಣವೇ ಭದ್ರತಾ ಪಡೆಗಳು ಆತನನ್ನು ಬಂಧಿಸಿವೆ. ಆ  ಬಳಿಕ ಸಿಡ್ನಿ ಕ್ರಿಕೆಟ್ ಗ್ರೌಂಡ್ ಆತನಿಗೆ ಎರಡು ವರ್ಷಗಳ ನಿಷೇಧವನ್ನು ಹೇರಿತ್ತು. ಆದರೆ ರಗ್ಬಿ ಆಸ್ಟ್ರೇಲಿಯಾ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ರಗ್ಬಿ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಪ್ರವೇಶಿಸಲು ಆತನಿಗೆ ಜೀವಮಾನದ ನಿಷೇಧವನ್ನು ಹೊರಡಿಸಿದೆ.
ಈ ಪಂದ್ಯವನ್ನು ಇಂಗ್ಲೆಂಡ್‌  21-17 ರಿಂದ ಗೆದ್ದು ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತ್ತು. “ಗ್ರ್ಯಾಂಡ್‌ ಸ್ಟ್ಯಾಂಡ್‌ನ ಮೇಲ್ಛಾವಣಿಗೆ ಹತ್ತಿ ಅಭಿಮಾನಿ ತೋರಿದ ವರ್ತನೆ ಅಘಾತಕಾರಿ ಮತ್ತು ಅವಮಾನಕರವಾಗಿದೆ. ಮತ್ತು ರಗ್ಬಿಯ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ. ಅದಕ್ಕಾಗಿ ಆತನಿಗೆ ಆಜೀವ ನಿಷೇಧವನ್ನು ಹೇರಲಾಗಿದೆ ಎಂದು ರಗ್ಬಿ ಆಸ್ಟ್ರೇಲಿಯಾ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!