ದರ್ಗಾದಲ್ಲಿ ಉರುಸ್ ಆಚರಣೆ : ಪ್ರಾರ್ಥನೆ ಮಾಡಿ ಬಂದ ಮುಸ್ಲಿಂ ಮುಖಂಡರು

ಹೊಸದಿಗಂತ ವರದಿ ಕಲಬುರಗಿ: 

ವಕ್ಫ್ ಟ್ರಿಬೂನಲ್ ನ್ಯಾಯಾಲಯದ ಆದೇಶದಂತೆ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದಗಾ೯ದಲ್ಲಿ ಮುಸ್ಲಿಂ ಮುಖಂಡರು ಉರುಸ್ ಆಚರಣೆ,ಪ್ರಾಥ೯ನೆ ಮಾಡಿ ಮಧ್ಯಾಹ್ನ 12 ಗಂಟೆಯೊಳಗೆ ದಗಾ೯ದಿಂದ ಹೊರಗೆ ಬಂದಿದ್ದಾರೆ.

ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದಗಾ೯ದಲ್ಲಿ ಶಿವರಾತ್ರಿ ದಿನದಂದು ದಗಾ೯ದ ಉರುಸ್ ಇರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಇಲ್ಲಿನ ವಕ್ಫ್ ನ್ಯಾಯಾಲಯವು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಉರುಸ್ ಆಚರಣೆಗೆ ಸಮಯ ನೀಡಿ ಆದೇಶ ಮಾಡಿತ್ತು.ಅದರಂತೆ ಉರುಸ್ ಆಚರಣೆ ಮಾಡಿ,ಪ್ರಾಥ೯ನೆ ಮಾಡಿ ಸರಿಯಾದ ಸಮಯಕ್ಕೆ ದಗಾ೯ದಿಂದ ಹೊರಬಂದಿದ್ದಾರೆ.

ಒಟ್ಟು 14 ಜನ ಮುಸ್ಲಿಂ ಮುಖಂಡರು ಉರುಸ್ ಆಚರಣೆ ಹಾಗೂ ಪ್ರಾಥ೯ನೆ ಮಾಡಿ ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದಗಾ೯ ಕಮಿಟಿಯ ಸದಸ್ಯರಾದ ಮೋಯಿನ್ ಕಾರಭಾರಿ ಹಾಗೂ ಆಸಿಫ್ ಅನ್ಸಾರಿ,ಕೋಟ್೯ ಆದೇಶದಂತೆ ನಾವು 14 ಜನ ಹೋಗಿ ಉರುಸ್ ಆಚರಣೆ ಪ್ರಾಥ೯ನೆ ಮಾಡಿ ಬಂದಿದ್ದೇವೆ.ದಗಾ೯ದಲ್ಲಿನ ಮಜರ್,ಗೆ ಪ್ರತಿ ವಷ೯ದಂತೆ ಈ ವಷ೯ವೂ ಸಂಪ್ರದಾಯದಂತೆ ಪೂಜೆ ಮಾಡಲಾಗಿದೆ.ಆದರೆ, ಹಿಂದೆ ಯಾವತ್ತೂ ಸಹ ಈ ರೀತಿಯಾಗಿ ಪೋಲಿಸ್ ಬಂದೋಬಸ್ತ್ ನಡುವೆ ಆಚರಣೆ ಮಾಡಿಲ್ಲ ಎಂದರು.

ಇದೆಲ್ಲಾ ರಾಜಕೀಯ ಪ್ರೇರಿತವಾಗಿ ಇಷ್ಟೆಲ್ಲಾ ಘಟನೆ ಆಗುತ್ತಿದೆ.ಆಳಂದನಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ.ಈ ಹಿಂದೆ ಕೂಡ ಪ್ರತಿ ವರ್ಷ ನಮ್ಮ ಪೂಜೆಯಲ್ಲಿ ಹಿಂದುಗಳು ಸಹ ಭಾಗಿಯಾಗಿದ್ದರು.ಅದರಂತೆ ಅವರು ಪೂಜೆಯ ವೇಳೆಯೂ ನಾವು ಭಾಗಿಯಾಗಿದ್ದೇವೆ ಎಂದು ಅವರು, ರಾಜಕೀಯ ಷಡ್ಯಂತ್ರದಿಂದ ಈ ರೀತಿ ಪೂಜೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!