spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಮೆರಿಕದಿಂದ ಪ್ರಜಾಪ್ರಭುತ್ವ ದೇಶಗಳ ಶೃಂಗಸಭೆ- ಚೀನಾ, ಟರ್ಕಿಗಳಿಗಿಲ್ಲ ಆಹ್ವಾನ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಚುವಲ್ ಆಗಿ ನಡೆಯಲಿರುವ ಪ್ರಜಾಪ್ರಭುತ್ವ ರಾಷ್ಟ್ರಗಳ ಶೃಂಗಸಭೆಗೆ ಅಮೆರಿಕ 110 ರಾಷ್ಟ್ರಗಳಿಗೆ ಆಹ್ವಾನ ನೀಡಿದ್ದು, ಈ ಸಭೆಗೆ ಚೀನಾ, ಟರ್ಕಿ, ಅಫ್ಘಾನಿಸ್ತಾನಗಳಿಗೆ ಆಹ್ವಾನ ನೀಡದಿರುವುದು ಈಗ ಚರ್ಚೆಗೆ ಕಾರಣವಾಗಿದೆ..
ಮಂಗಳವಾರ ಅಮೆರಿಕದ ವಿದೇಶಾಂಗ ಇಲಾಖೆ ಯ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿದ್ದು, ಡಿ. 9-10 ರಂದು ನಡೆಯಲಿರುವ ಶೃಂಗಸಭೆಗೆ ಅಮೆರಿಕವು ಭಾರತವನ್ನೂ ಸೇರಿಸಿ 110 ರಾಷ್ಟ್ರಗಳಿಗೆ ಆಹ್ವಾನ ನೀಡಿದೆ.
ಇಲ್ಲಿ ಅಮೆರಿಕವು ಚೀನಾಕ್ಕೆ ಆಹ್ವಾನ ನೀಡಿಲ್ಲ ಎಂಬುದಷ್ಟೇ ವಿಷಯವಲ್ಲ. ಯಾವ ತೈವಾನ್ ಅನ್ನು ತನ್ನದೇ ಭಾಗ ಎಂದು ಚೀನಾ ಪ್ರತಿಪಾದಿಸುತ್ತದೆಯೋ ಅಂತಹ ತೈವಾನ್ ಗೆ ಆಹ್ವಾನ ನೀಡಲಾಗಿದೆ.
ಇನ್ನೊಂದೆಡೆ, ಟರ್ಕಿಯು ಅಮೆರಿಕ ಪ್ರಣೀತ ನ್ಯಾಟೊ ಪಡೆಯ ಸದಸ್ಯ ರಾಷ್ಟ್ರ. ಹಾಗಿದ್ದೂ ಅದಕ್ಕೆ ಆಹ್ವಾನ ಹೋಗಿಲ್ಲ. ಆಶ್ಚರ್ಯ ಎಂಬಂತೆ ಬಿಡೆನ್ ಆಡಳಿತವು ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಅಭಿಮಾನಿಯಾದ ಬೊಲ್ಸೆನಾರೊ ಅವರನ್ನು ಅಧ್ಯಕ್ಷರನ್ನಾಗಿ ಹೊಂದಿರುವ ಬ್ರೆಜಿಲ್ ಗೆ ಆಹ್ವಾನ ನೀಡಿದೆ.
ಈ ಸಭೆಯಲ್ಲಿ ಭಾರತ, ಪಾಕಿಸ್ತಾನ, ಇಸ್ರೇಲ್, ಇರಾಕ್ ಸೇರಿದಂತೆ ಹಲವು ರಾಷ್ಟ್ರಗಳು ಭಾಗಿಯಾಗಲಿವೆ. ಈ ಸಭೆ ಪ್ರಮುಖ ಪ್ರಾದೇಶಿಕ ಪಾಲುದಾರರೊಂದಿಗೆ ಒಗ್ಗಟ್ಟು, ಸರ್ವಾಧಿಕಾರದ ವಿರುದ್ಧ ಜನರ ರಕ್ಷಣೆ, ಮಾನವ ಹಕ್ಕುಗಳನ್ನು ಉತ್ತೇಜಿಸುವ ಕುರಿತು ಚರ್ಚೆ ನಡೆಯಲಿದೆ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss