ಯುಎಸ್ ಫೆಡರಲ್‌ ಬಡ್ಡಿದರ 75 bps ರಷ್ಟು ಏರಿಕೆ, 1994ರ ಬಳಿಕ ಅತಿದೊಡ್ಡ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕಾ ಫೆಡರಲ್ ರಿಸರ್ವ್ ಬ್ಯಾಂಕ್‌ ತನ್ನ ಬಡ್ಡಿ ದರವನ್ನು 75 ಬಿಪಿಎಸ್ ನಷ್ಟು ಹೆಚ್ಚಿಸಿದೆ. 1994 ರ ನಂತರ ಇದು ಭಾರಿ ಹೆಚ್ಚಳ ಎಂದರೆ ತಪ್ಪಾಗಲಾರದು. ಜೂನ್ 15 ರಂದು, US ಫೆಡರಲ್ ರಿಸರ್ವ್ ತನ್ನ ಬಡ್ಡಿದರವನ್ನು ಶೇಕಡಾವಾರು ಪಾಯಿಂಟ್‌ನ ಮೂರನೇ ಒಂದು ಭಾಗದಷ್ಟು ಅಥವಾ 75 bps ಹೆಚ್ಚಿಸುತ್ತಿರುವುದಾಗಿ ಘೋಷಿಸಿದೆ. ಹಣದುಬ್ಬರಕ್ಕೆ ಕಡಿವಾಣ ಹಾಕಲು ಬಡ್ಡಿದರಗಳನ್ನು ಏರಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ. ಮೇ ತಿಂಗಳಲ್ಲಿ ಗ್ರಾಹಕರ ಬೆಲೆ ಹಣದುಬ್ಬರ ಶೇ.8.6ಕ್ಕೆ ತಲುಪಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇಂದ್ರೀಯ ಬ್ಯಾಂಕ್ ದರ ಏರಿಕೆಯನ್ನು ಘೋಷಿಸುವ ಜೊತೆಗೆ ಹಣದುಬ್ಬರವನ್ನು ಪ್ರತಿಶತ 2ಕ್ಕೆ ಮರಳಿ ತರಲು ಬದ್ಧವಾಗಿದೆ ಎಂದರು. ಮುಂಬರುವ ತಿಂಗಳುಗಳಲ್ಲಿ ದೇಶದ ಆರ್ಥಿಕತೆಯು ಆಮೆ ನಡಿಗೆಯಲ್ಲಿ ಸಾಗಲಿದ್ದು ಮತ್ತು ನಿರುದ್ಯೋಗ ದರವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ. ಉಕ್ರೇನ್‌ನಲ್ಲಿನ ಯುದ್ಧ ಮತ್ತು ಚೀನಾದ ಲಾಕ್‌ಡೌನ್ ನೀತಿ, ಕೊರೋನಾ ಸಾಂಕ್ರಾಮಿಕ ರೋಗ ಮತ್ತು ಹೆಚ್ಚಿದ ಇಂಧನ ಬೆಲೆಗಳಿಂದ ಹಣದುಬ್ಬರ ಉಂಟಾಗುತ್ತಿದೆ ಎಂದು ಕೇಂದ್ರ  ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿ ಹೇಳಿದೆ.

ಈ ವರ್ಷದ ಅಂತ್ಯದ ವೇಳೆಗೆ 3.4 ಪ್ರತಿಶತ ಮತ್ತು 2023 ರಲ್ಲಿ 3.8 ಪ್ರತಿಶತಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಫೆಡರಲ್ ಅಧಿಕಾರಿಗಳು‌ ಹೇಳಿದ್ದಾರೆ. ಈ ವರ್ಷ ಬೆಳವಣಿಗೆ ದರ ಶೇ.1.7ಕ್ಕಿಂತ ಕಡಿಮೆ ಇದೆ. ಈ ವರ್ಷದ ಅಂತ್ಯದ ವೇಳೆಗೆ ನಿರುದ್ಯೋಗವು ಶೇಕಡಾ 3.7 ಕ್ಕೆ ಏರುವ ನಿರೀಕ್ಷೆಯಿದೆ. ಇದು 2024 ರ ವೇಳೆಗೆ 4.1 ಪ್ರತಿಶತಕ್ಕೆ ಹೆಚ್ಚಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!