Thursday, July 7, 2022

Latest Posts

ಅಮೆರಿಕದಲ್ಲಿ ಹೆಚ್ಚುತ್ತಿದೆ ಕೋವಿಡ್:‌ ಆಸ್ಪತ್ರೆಗಳ ಮೇಲೆ ಒತ್ತಡ

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕವಾಗಿ ಕೋವಿಡ್‌ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ನಿಟ್ಟುಸಿರು ಬಿಟುವಷ್ಟರಲ್ಲಿ ಮತ್ತೆ ಭಯದ ವಾತಾವರಣ ಸೃಷ್ಟಿಯಾಗುವ ಲಕ್ಚಣ ಕಂಡುಬರುತ್ತಿದೆ. ಏಕೆಂದರೆ ಅಮೆರಿಕಾದಲ್ಲಿ ಮತ್ತೆ ಕೊರೋನಾ ಸೋಂಕು ಮರುಕಳಿಸುತ್ತಿದೆ.

ಈ ಬಗ್ಗೆ ಬ್ಲೂಮ್‌ಬರ್ಗ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, “ಅಮೆರಿಕದಲ್ಲಿ ವ್ಯಾಪಕವಾಗಿ ಕೋವಿಡ್‌ ಲಸಿಕೆ ನೀಡಿದ್ದರು ಸಹ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವಂತಹ ಕೋವಿಡ್‌ ರೂಪಾಂತರಿ ʼಡೆಲ್ಟಾʼ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಮತ್ತೆ ಆರೋಗ್ಯ ಕೇಂದ್ರಗಳಲ್ಲಿ ಒತ್ತಡ ಹೆಚ್ಚಾಗಿದ್ದು, ಹಾಸಿಗೆ (ಬೆಡ್) ಕೊರತೆ ಎದುರಾಗುತ್ತಿದೆ” ಎಂದು ತಿಳಿಸಿದೆ.

ಅಮೆರಿಕ ಆರೋಗ್ಯ ಮತ್ತು ಮಾನವ ಸೇವೆ ಇಲಾಖೆಯಿಂದ ಬ್ಲೂಮ್‌ಬರ್ಗ್ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಹೇಳುವುದಾದರೆ “ನಂವೆಂಬರ್‌ ಆರಂಭದಲ್ಲಿಯೇ ಅಮೆರಿಕದ ವಿವಿಧ ಭಾಗಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ”.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸುಮಾರು 15 ರಾಜ್ಯಗಳ ಕೋವಿಡ್‌ ಸೋಂಕಿತರು ಮತ್ತು ಶಂಕಿತರು ಐಸಿಯು ಬೆಡ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೊರಾಡೋ, ಮಿನ್ನೇಸೋಟ ಮತ್ತು ಮಿಚಿಗನ್ ಆಸ್ಪತ್ರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿ ತಿಳಿಸಿದೆ.

ಪ್ರಸ್ತುತ ಅಮೆರಿಕದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವುದು ಮಿಚಿಗನ್ ರಾಜ್ಯ. ಆದರೆ ಈ ರಾಜ್ಯದಲ್ಲಿ  ಸಾರ್ವಜನಿಕವಾಗಿ ಯಾವುದೇ ಕೋವಿಡ್‌ ನಿರ್ಭಂದ ಹೇರಿಲ್ಲ. ಬದಲಿಗೆ ಮಾಸ್ಕ್‌ ಧರಿಸುವುದು ಮತ್ತು ಲಸಿಕೆ ಪಡೆಯುವುದನ್ನು ಮಾತ್ರ ಕಡ್ಡಾಯ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss