spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿರಿಯಾದ ಮೇಲೆ ಅಮೆರಿಕ ದಾಳಿ: ಅಲ್ ಖೈದಾ ನಾಯಕನ ಹತ್ಯೆ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕ ಮಿಲಿಟರಿ ಪಡೆ ಸಿರಿಯಾದ ಮೇಲೆ ಡ್ರೋನ್ ದಾಳಿ ನಡೆಸಿದ್ದು, ದಾಳಿಯಲ್ಲಿ ಅಲ್ ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್- ಮಾತರ್ ನನ್ನು ಹತ್ಯೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಯುಎಸ್ ಸೆಂಟ್ರಲ್ ಕಮಾಂಡ್ ವಕ್ತಾರ ಮೇಜರ್ ಜಾನ್ ರಿಗ್ಸ್ ಬೀ,  ಎಂಕ್ಯೂ-9 ಡ್ರೋನ್ ಮೂಲಕ ಯುಎಸ್ ಮಿಲಿಟರಿ ದಾಳಿ ನಡೆಸಿದ್ದು, ಅಲ್ ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್- ಮಾತರ್ ನನ್ನು ಹತ್ಯೆ ಮಾಡಿದೆ. ಆದರೆ ಯಾವುದೇ ನಾಗರಿಕರ ಸಾವು ವರದಿಯಾಗಿಲ್ಲ ಎಂದರು.
ಸಿರಿಯಾದಲ್ಲಿನ ಅಮೆರಿಕದ ರಾಯಭಾರಿ ಕಚೇರಿ ಮೇಲೆ ದಾಳಿ ನಡೆದ ಎರಡು ದಿನಗಳ ಬಳಿಕ ಈ ಡ್ರೋನ್ ದಾಳಿ ನಡೆದಿದೆ.
ಅಮೆರಿಕಕ್ಕೆ ಹಾನಿ ಮಾಡಲು ಉದ್ದೇಶಿಸಿರುವ ಅಲ್ ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳನ್ನು ಅಮೆರಿಕ ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ ಎನ್ನಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss