ದುರಸ್ತಿಗಾಗಿ ಭಾರತಕ್ಕೆ ಬಂದ ಅಮೆರಿಕಾ ನೌಕಾಪಡೆ ಹಡಗು: ಬದಲಾಗುತ್ತಿದೆ ಭಾರತ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇದೇ ಮೊದಲ ಬಾರಿಗೆ ಅಮೆರಿಕದ ನೌಕಾಪಡೆಯ ಹಡಗು, ದುರಸ್ತಿ ಸೇವೆಗಳನ್ನು ಪಡೆಯಲು ಭಾರತಕ್ಕೆ ಆಗಮಿಸಿದೆ. ಅಮೆರಿಕ ನೌಕಾಪಡೆಯ (ಯುಎಸ್‌ಎನ್‌ಎಸ್) ಚಾರ್ಲ್ಸ್ ಡ್ರೆವ್, ದುರಸ್ತಿ ಸೇವೆಗಳನ್ನು ಪಡೆಯಲು ಭಾನುವಾರ ಚೆನ್ನೈನ ಕಟ್ಟುಪಲ್ಲಿಯಲ್ಲಿನ ಎಲ್ ಅಂಡ್ ಟಿ ನೌಕಾಂಗಣಕ್ಕೆ ಆಗಮಿಸಿದೆ. ಈ ಮೂಲಕ ಅಮೆರಿಕ-ಭಾರತ ನಡುವಿನ ಕಾರ್ಯತಂತ್ರ ಸಂಬಂಧ ಮತ್ತಷ್ಟು ಬಲಿಷ್ಠಗೊಂಡಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಅಮೆರಿಕ ನೌಕಾಪಡೆಯ ಹಡಗಿನ ದುರಸ್ತಿ ಕಾರ್ಯ ಭಾರತದಲ್ಲಿದೆ ನಡೆಯುತ್ತಿದೆ. ಇದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರಕ್ಕೆ ಭಾರಿ ಉತ್ತೇಜನ ದೊರೆತಿದೆ. ಕಟ್ಟುಪಲ್ಲಿಯಲ್ಲಿನ ಎಲ್ ಅಂಡ್ ಟಿ ನೌಕಾಂಗಣಕ್ಕೆ ಚಾರ್ಲ್ಸ್ ಡ್ರೆವ್ ಹಡಗು ನಿರ್ವಹಣೆಗಾಗಿ ಅಮೆರಿಕ ಗುತ್ತಿಗೆಯನ್ನು ನೀಡಿದೆ. ಇದು ಭೌಗೋಳಿಕ ಹಡಗು ದುರಸ್ತಿ ಮಾರುಕಟ್ಟೆಯಲ್ಲಿ ಭಾರತೀಯ ನೌಕಾಂಗಣಗಳ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ನೌಕಾಂಗಣಗಳು ಅತ್ಯಾಧುನಿಕ ಕಡಲ ತಂತ್ರಜ್ಞಾನ ಮೂಲಕ ವ್ಯಾಪಕ ಶ್ರೇಣಿಯ ಮತ್ತು ಕಡಿಮೆ ವೆಚ್ಚದ ಹಡಗು ದುರಸ್ತಿ ಹಾಗೂ ನಿರ್ವಹಣೆ ಸೇವೆಗಳನ್ನು ನೀಡುತ್ತಿವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!