ಉಕ್ರೇನ್‌ ಗೆ ಅಮೆರಿಕ ಸಾಥ್:‌ 8500 ಸೈನಿಕರನ್ನು ಸಜ್ಜುಗೊಳಿಸಿದ ಯುಎಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡುವ ಭೀತಿಯಿಂದ ಅಮೆರಿಕ 8500 ಸೈನಿಕರನ್ನು ಸಜ್ಜುಗೊಳಿಸಿದೆ. ರಷ್ಯಾದ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಒಗ್ಗೂಡಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ತಿಳಿಸಿದ್ದಾರೆ.
ಈಗಾಗಲೇ ವಶಪಡಿಸಿಕೊಂಡಿರುವ ಕ್ರಿಮಿಯಾ ಪ್ರದೇಶದಲ್ಲಿ ರಷ್ಯಾ 1 ಲಕ್ಷ ಸೈನಿಕರನ್ನು ನಿಯೋಜನೆ ಮಾಡಿದೆ. ಹೀಗಾಗಿ ರಷ್ಯಾ ಉಕ್ರೇನ್‌ ಮೇಲೆ ದಾಳಿ ನಡೆಸುವ ಎಲ್ಲಾ ಸಂಚು ರೂಪಿಸಿದೆ ಎಂದು ಶಂಕಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಯ ನಡುವೆಯು ರಷ್ಯಾದ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌ ಉಕ್ರೇನ್‌ ಮೇಲೆ ದಾಳಿ ಮಾಡುವ ಉದ್ದೇಶ ಇಲ್ಲ ಎಂದಿದ್ದಾರೆ.
ಆದರೂ ಕೂಡ ಎಲ್ಲಾ ಸಿದ್ಧತೆಗಳನ್ನು ನಡೆಸಲು ಅಮೆರಿಕ ಕೂಡ ಉಕ್ರೇನ್‌ ಜತೆ ಕೈ ಜೋಡಿಸಿದ್ದು, 8500 ಸೈನಿಕರನ್ನು ಅಲರ್ಟ್‌ ಆಗಿರುವಂತೆ ತಿಳಿಸಿದೆ. ಅಮೆರಿಕ ಜತೆಗೆ ಮ್ಯಾಟೋ ಕೂಡ ಕಾರ್ಯಾಚರಣೆ ನಡೆಸಲು ಸಜ್ಜಾಗಿದ್ದು, ಅಗತ್ಯವಿದ್ದರೆ ಜೆಟ್‌ ಹಾಗೂ ಸೇನಾ ನೌಕೆಯನ್ನು ಒದಗಿಸಲು ಸಿದ್ದವಾಗಿದೆ.
ನ್ಯಾಟೋ ಉಕ್ರೇನ್‌ ಗೆ ಸಹಕರಿಸುವುದಿಲ್ಲ ಎಂದು ರಷ್ಯಾ ನೀಡಿರುವ ಹೇಳಿಕೆಯನ್ನು ವಿರೋಧಿಸಿದ ಅಮೆರಿಕ ಹಾಗೂ ನ್ಯಾಟೋ, ರಷ್ಯಾಕ್ಕೆ ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!