ಚೀನಾ ಹುಟ್ಟಡಗಿಸಲು ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಜಂಟಿ ನೌಕಾ ಕಸರತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾ ಹುಟ್ಟಡಗಿಸಲು ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಆಸ್ಟ್ರೇಲಿಯಾ ಜಂಟಿ ನೌಕಾ ಸಮರಭ್ಯಾಸ ಕೈಗೊಂಡಿವೆ. ಇಂಡೋ-ಪೆಸಿಫಿಕ್ ಪ್ರದೇಶದ ರಕ್ಷಣೆ ಮತ್ತು ಸ್ಥಿರತೆಗಾಗಿ ಜಪಾನ್‌ ಅಂತರಾಷ್ಟ್ರೀಯ ಜಲ ಗಡಿಯಲ್ಲಿ ಎರಡು ವಾರಗಳವರೆಗೆ ಈ ದ್ವೈವಾರ್ಷಿಕ ‘ಕೀನ್ ಸ್ವೋರ್ಡ್’ ಅಭ್ಯಾಸ ಮುಂದುವರಿಯುತ್ತದೆ. ಚೀನಾದ ಆಕ್ರಮಣಕಾರಿ ಚಟುವಟಿಕೆಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ಈ ಕಸರತ್ತುಗಳು ನಡೆಯುತ್ತಿವೆ.

ಜಿ 20ಶೃಮಗಸಭೆ ಬೆನ್ನಲ್ಲೇ ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಸೇರಿ ಅಮೆರಿಕ ಕೂಡಾ ತನ್ನ ನೌಕಾ ಕಸರತ್ತನ್ನು ಪ್ರಾರಂಭಿಸಿರುವುದು ಗಮನಾರ್ಹ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಚೀನಾದಿಂದ ಸವಾಲುಗಳು ಹೆಚ್ಚುತ್ತಿವೆ. ವ್ಯಾಪಾರ, ತಂತ್ರಜ್ಞಾನ ಮತ್ತು ತೈವಾನ್‌ಗೆ ಚೀನಾ ಒಡ್ಡಿರುವ ಬೆದರಿಕೆಯನ್ನು ಎದುರಿಸಲು ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಜಂಟಿ ಮಿಲಿಟರಿ ವ್ಯಾಯಾಮಗಳನ್ನು ನಡೆಸುತ್ತಿವೆ.

ಜಲಾಂತರ್ಗಾಮಿ ನೌಕೆಗಳನ್ನು ಎದುರಿಸುವುದು ಮತ್ತು ಕ್ಷಿಪಣಿಗಳನ್ನು ತಿರುಗಿಸುವುದು ಮುಂತಾದ ಕುಶಲತೆಗಳೂ ನಡೆಯುತ್ತಿವೆ. ಇದರಲ್ಲಿ ಅಮೆರಿಕ, ಜಪಾನೀಸ್, ಕೆನಡಾ ಮತ್ತು ಆಸ್ಟ್ರೇಲಿಯಾದ ಯುದ್ಧ ವಿಮಾನಗಳು ಭಾಗವಹಿಸಿದ್ದವು. ಆಸ್ಟ್ರೇಲಿಯ ಮತ್ತು ಕೆನಡಾ ನೌಕಾಪಡೆ ಕೂಡ ಭಾಗಿಯಾಗಿದ್ದು, ಇಂಡೋ-ಪೆಸಿಫಿಕ್ ವಲಯದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಇದು ಹೆಚ್ಚಿನ ಶಕ್ತಿಯನ್ನು ಪಡೆದುಕೊಂಡಿದೆ ಎಂದು ಸಂಬಂಧಿತ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏತನ್ಮಧ್ಯೆ, ಚೀನಾ ತೈವಾನ್ ಅನ್ನು ತನ್ನ ನಿಯಂತ್ರಣಕ್ಕೆ ತರಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣ ಬಹಳ ಹಿಂದಿನಿಂದಲೂ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!