ಅಮೇರಿಕಾದ ಪ್ಲಾಸ್ಟಿಕ್‌ ಪ್ರಾಬ್ಲಂ! ಮಾಡಿದ್ದುಣ್ಣೋ ಮಹರಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಶ್ವದ ಮೂರನೇ ಅತಿದೊಡ್ಡ ಶಿಪ್ಪಿಂಗ್‌ ಲೈನ್‌ CMA CGM ಇನ್ನುಮುಂದೆ ಸ್ಕ್ರ್ಯಾಪ್‌ ಪ್ಲಾಸ್ಟಿಕ್‌ ಗಳ ವಿತರಣೆಯನ್ನು ನಿಷೇಧಿಸಿದೆ. CMA CGM ನ ಈ ನಿರ್ಧಾರವು ಶ್ರೀಮಂತ ರಾಷ್ಟ್ರಗಳು ಅದರಲ್ಲೂ ವಿಶೇಷವಾಗಿ ಅಮೆರಿಕವು ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಪ್ಲಾಸ್ಟಿಕ್‌ ತ್ಯಾಜ ಎಸೆಯುವುದರ ವಿರುದ್ಧ ಜಾಗತಿಕ ಹಿನ್ನಡೆ ಸಾಧಿಸುವುದರಲ್ಲಿ ಮೈಲಿಗಲ್ಲು ಸಾಧಿಸಿದಂತಾಗಿದೆ.

ಚಿಂದಿ ಪ್ಲಾಸ್ಟಿಕ್‌ ಗೆ ಚೀನಾ ಅತಿದೊಡ್ಡ ತಾಣವಾಗಿತ್ತು. 1992 ರಲ್ಲಿ ಚೀನಾ ಜಾಗತಿಕ ಪ್ಲಾಸ್ಟಿಕ್‌ ತ್ಯಾಜ್ಯದ 72% ನಷ್ಟನ್ನು ಆಮದು ಮಾಡಿಕೊಂಡಿತ್ತು. ಈ ಸ್ರ್ಕಾಪ ಪ್ಲಾಸ್ಟಿಕ್‌ ಅನ್ನು ಚೀನಾ ಉತ್ಪಾದನೆಯಲ್ಲಿ ಮರುಬಳಕೆ ಮಾಡಿಕೊಳ್ಳುತ್ತಿತ್ತು. ಆದರೆ ಚೀನಾ ಆರ್ಥಿಕತೆ ಬೆಳೆದಂತೆ ಅದರ ದೇಶೀಯ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯೂ ಹೆಚ್ಚಿತು. ಇದರಿಂದಾಗಿ ಚೀನಾ ಮರುಬಳಕೆ ಮಾಡಲು ತನ್ನದೇ ಆದ ಪ್ಲಾಸ್ಟಿಕ್ ಅನ್ನು ಹೊಂದುವಂತಾಯಿತು. ಹಾಗಾಗಿ ಚೀನಾ ನ್ಯಾಷನಲ್ ಸ್ವೋರ್ಡ್ಎಂಬ ನೀತಿಯ ಮೂಲಕ ಪ್ಲಾಸ್ಟಿಕ್ ಆಮದುಗಳನ್ನು ಮಿತಿಗೊಳಿಸಲು ಪ್ರಾರಂಭಿಸಿತು.

ಚೀನಾ ಮಿತಿಗೊಳಿಸಿದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ಮಲೇಷಿಯಾ ಮತ್ತು ಇಂಡೋನೇಷ್ಯಾದಂತಹ ಆಗ್ನೇಯ ಏಷ್ಯಾದ ರಾಷ್ಟ್ರಗಳಿಗೆ ತಮ್ಮ ಪ್ಲಾಸ್ಟಿಕ್‌ ತ್ಯಾಜದ ರಪ್ತನ್ನು ತಿರುಗಿಸಲು ಹರಸಾಹಸ ಪಟ್ಟವು. ಆದರೆ ಈ ರಾಷ್ಟ್ರಗಳೂ ಕೂಡ 2019ರಲ್ಲಿ ಪ್ಲಾಸ್ಟಿಕ್ ಆಮದುಗಳನ್ನು ನಿಷೇಧಿಸಿವೆ. ಚೀನಾ ಮತ್ತ ನೆರೆಯ ರಾಷ್ಟ್ರಗಳು ಪ್ಲಾಸ್ಟಿಕ್‌ ಆಮದನ್ನು ಮಿತಿಗೊಳಿಸಲು ಪ್ರಾರಂಭಿಸಿದಾಗ ಶಿಪ್ಪಿಂಗ್‌ ಲೈನ್‌ ಗಳು ಎಚ್ಚರಿಕೆ ವಹಿಸಿದವು ಏಕೆಂದರೆ ಸ್ವೀಕರಿಸುವ ದೇಶಗಳು ಸ್ಕ್ರ್ಯಾಪ್ ಪ್ಲಾಸ್ಟಿಕ್ ಅನ್ನು ಸ್ವೀಕರಿಸಲು ನಿರಾಕರಿಸಬಹುದು, ಸರಕುಗಳನ್ನು ಡಂಪ್ ಮಾಡಲು ಹಡಗು ಮಾರ್ಗಗಳನ್ನು ಒತ್ತಾಯಿಸಬಹುದು ಅಥವಾ ಅದು ಬಂದ ಸ್ಥಳದಿಂದ ಹಿಂತಿರುಗಿಸಬಹುದು. ಈ ಹಿನ್ನೆಲೆಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಶಿಪ್ಪಿಂಗ್‌ ಲೈನ್‌ ಸ್ಕ್ರ್ಯಾಪ್‌ ಪ್ಲಾಸ್ಟಿಕ್‌ ಗಳನ್ನು ಸಾಗಿಸುವುದನ್ನು ನಿಷೇಧಿಸಿದೆ.

ಈ ಎಲ್ಲ ನಿಷೇಧಗಳ ಪರಿಣಾಮವಾಗಿ ಅಮೆರಿಕದ ಸ್ಕ್ರ್ಯಾಪ್‌ ಪ್ಲಾಸ್ಟಿಕ್‌ ರಪ್ತು 70% ರಷ್ಟು ಕುಸಿದಿದೆ. ಪ್ರಸ್ತುತ CMA CGM ನ ಈ ನಿರ್ಧಾರವು ಅಮೇರಿಕದ ಪ್ಲಾಸ್ಟಿಕ್‌ ರಪ್ತಿಗೆ ಜಾಗತಿಕ ಹಿನ್ನಡೆಯುಂಟು ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!