ಕೋಟ್ ಮುಗೀತು, ವಾಕ್ಯ ಮತ್ತೆ ಹೇಳಿ ಎಂಬ ಸೂಚನೆಗಳನ್ನೂ ಭಾಷಣದಲ್ಲಿ ಓದಿ ನಗೆಪಾಟಲಾದ ಬಿಡೆನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕಾ ಅಧ್ಯಕ್ಷ ಜೋ ಬಿಡೆನ್‌ ಭಾಷಣ ಮಾಡುವ ವೇಳೆ ಟೆಲಿಪ್ರಾಂಪ್ಟರ್‌ನಲ್ಲಿ ಬರೆದಿದ್ದ ಸೂಚನೆಗಳನ್ನು ಜೋರಾಗಿ ಓದಿ ನಗೆಪಾಟಲಿಗೀಡಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ʻಕೋಟ್ ಮುಗೀತು, ವಾಕ್ಯ ಮತ್ತೆ ಹೇಳಿʼ ಎಂಬ ಸೂಚನೆಗಳನ್ನೂ ಭಾಷಣದಲ್ಲಿ ಗಟ್ಟಿಯಾಗಿ ಓದಿದ್ದಾರೆ.

ಅಮೆರಿಕಾದಲ್ಲಿ ಗರ್ಭಪಾತದ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಹೊಸ ಕ್ರಮಗಳನ್ನು ಘೋಷಿಸುವ ವೇಳೆ ಈ ಅಚಾತುರ್ಯ ನಡೆದಿದೆ. ವೈರಲ್‌ ಆಗಿರುವ ಈ ವಿಡಿಯೋ ಬಗ್ಗೆ ಕೆಲವರು ವ್ಯಂಗ್ಯ ಕಮೆಂಟ್‌ ಮಾಡುತ್ತಿದ್ದರೆ, ಇನ್ನೂ ಕೆಲವರು ಬಿಡೆನ್‌ ಹೇಳಿದ್ದರಲ್ಲಿ ತಪ್ಪೇನಿಲ್ಲ ಅಂತಿದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!