ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಮತದಾನ ಶುರುವಾದ ಕೆಲವೇ ಗಂಟೆಗಳಲ್ಲಿ ಸಣ್ಣ ಸಣ್ಣ ಕೌಂಟಿಗಳಲ್ಲಿ ಮತದಾನ ಪೂರ್ಣಗೊಂಡಿದ್ದು ಫಲಿತಾಂಶವೂ ಹೊರಬಿದ್ದಿದೆ.
ನ್ಯೂ ಹ್ಯಾಂಪ್‌ಶೈರ್‌ನ ಡಿಕ್ಸ್ವಿಲ್ಲೆ ನಾಚ್‌ನಲ್ಲಿ ಮೊದಲ ಫಲಿತಾಂಶ ಬಂದಿದೆ. ಅಲ್ಲಿನ ಒಟ್ಟು ಆರು ಮತಗಳಲ್ಲಿ ತಲಾ ಮೂರು ಮತಗಳು ಟ್ರಂಪ್ ಮತ್ತು ಹ್ಯಾರಿಸ್‌ಗೆ ಬಿದ್ದಿವೆ.
2020ರಲ್ಲಿ ಇಲ್ಲಿನ ಬೈಡನ್ ಪರ 5 ಮಂದಿ ಮತ ಹಾಕಿದ್ದರೆ ಟ್ರಂಪ್ 0 ಮತ ಪಡೆದಿದ್ದರು.
ಕೆಲ ಸಮೀಕ್ಷೆಗಳು ಟ್ರಂಪ್ ಗೆಲ್ಲುತ್ತಾರೆ ಎಂದರೆ ಕೆಲ ಸಮೀಕ್ಷೆಗಳು ಕಮಲಾ ಗೆಲ್ಲಬಹುದು ಎಂದು ಹೇಳಿವೆ. ಇಬ್ಬರ ಮಧ್ಯೆ ನೇರಾನೇರ ಪೈಪೋಟಿ ಇದ್ದು ಸೋಲಿನ ಅಂತರ ಬಹಳ ಕಡಿಮೆ ಇರಬಹುದು ಎಂದು ಸಮೀಕ್ಷೆಗಳು ಹೇಳಿವೆ.
ಭಾರತೀಯ ಕಾಲಮಾನ ಬುಧವಾರ ಸಂಜೆ ಮುಂದಿನ ಅಮೆರಿದ ಅಧ್ಯಕ್ಷರು ಯಾರಾಗ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.