spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

30 ವರ್ಷದ ಹಳೆಯ ಕಾರು ಈಗ ‘ಫಕೀರಾ ಬರ್ಗರ್’ ಸ್ಟಾಲ್: ಫಾರಿನ್ ರಿಟರ್ನ್ ವ್ಯಕ್ತಿ ‘ಬರ್ಗರ್ ವಾಲಾ’ ಆಗಿದ್ದು ಹೀಗೆ

- Advertisement -Nitte
  • ಹಿತೈಷಿ

ವಯಸ್ಸಾಗುತ್ತಿದ್ದಂತೆ ಎಷ್ಟೋ ಜನ ತಮ್ಮ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳೂತ್ತಾರೆ. ಆದರೆ ಬದುಕಿನಲ್ಲಿ ಏನಾದರೂ ವಿಭಿನ್ನ ಪ್ರಯತ್ನ ಮಾಡಿ ಸಾಧಿಸಬೇಕು ಅನ್ನೋ ಜನರ ಪೈಕಿ ಈ ವ್ಯಕ್ತಿಯೂ ಒಬ್ಬರಾಗಿದ್ದಾರೆ.
ದಶಕಗಳ ಕಾಲ ವಿದೇಶದಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸಿದವರು ಈಗ ಅಹಮದಾಬಾದ್ ನಲ್ಲಿ ಬರ್ಗರ್ ಮಾರುತ್ತಿದ್ದಾರೆ. ಅಮೆರಿಕ-ಯುಕೆ ಎಂದು ಸುತ್ತಾಡಿ ಈಗ ಕುಟುಂಬದ ಕಷ್ಟಕ್ಕೆ ನೆರವಾಗಲು ಭಾರತಕ್ಕೆ ಮರಳಿದ ವ್ಯಕ್ತಿಯ ಬರ್ಗರ್ ಅಂಗಡಿ ಕಥೆ.

ಪ್ರಾರಂಭ: ಪತ್ನಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಾರಣ ಪಾರ್ಥೀವ್ ಅವರು 2020ರಲ್ಲಿ ಭಾರತಕ್ಕೆ ಮರಳಿ ಬಂದು ಇಲ್ಲೇ ವಾಸ್ತವ್ಯ ಹೂಡಿದರು. ಆದರೆ ಕೋವಿಡ್ ಸಮಯದಲ್ಲಿ ತಮ್ಮ ಎಲ್ಲಾ ಹಣ ಖರ್ಚಾಗಿ ಹೋಗಿತ್ತು. ಅದೇ ವೇಳೆ ಹಣ ಸಂಪಾದಿಸಲೆಂದೇ ಪ್ರಾರಂಭಿಸಿದ್ದು ‘ಫಕೀರಾ ಬರ್ಗರ್ಸ್’.

FAKIRAA UNCLE Selling Burger from his Maruti 800 Car | Indian Street Food - YouTube
ಎಲ್ಲಿದೆ?: ಫಕೀರಾ ಬರ್ಗರ್ಸ್ ಅಂದ ಕೂಡಲೇ ಯಾವುದೋ ದೊಡ್ಡ ರೆಸ್ಟೋರೆಂಟ್ ಅಂದುಕೊಳ್ಳಬೇಡಿ. ಇದಿರೋದು ಒಂದು ಕಾರಿನ ಢಿಕ್ಕಿಯಲ್ಲಿ. ಪಾರ್ಥೀವ್ ಅವರ 30 ವರ್ಷದ ಹಳೆಯ ಮಾರುತಿ 800 ಕಾರನ್ನು ಹೊಸ ಸ್ಟಾಲ್ ಗೆ ಬೇಕಿರುವಂತೆ ಮರು ರೂಪಕೊಟ್ಟರು.

ಏನು ಸಿಗುತ್ತೆ ಇಲ್ಲಿ?:
ಇಲ್ಲಿ ರುಚಿ ರುಚಿಯಾದ ಅಮೆರಿಕನ್ ಹಾಗೂ ಮೆಕ್ಸಿಕನ್ ಶೈಲಿಯ ಬರ್ಗರ್, ಸ್ಯಾಂಡ್ ವಿಚ್, ತವಾ ಪಿಜ್ಜಾ ಸಿಗೋದು ವಿಶೇಷ.

ಈ ಎಲ್ಲಾ ತಿನಿಸುಗಳ ಬೆಲೆ 60 ರೂ. ಇಂದ ಪ್ರಾರಂಭವಾಗಲಿದ್ದು, ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ತುಂಬಾ ಕಡಿಮೆ ಬೆಲೆಗೆ ರುಚಿಯಾದ ಸ್ನ್ಯಾಕ್ಸ್ ಸಿಗೋದು ಪಕ್ಕಾ.

ಪಾರ್ಥೀವ್ ಅವರು ದಿನಕ್ಕೆ 100 ಬರ್ಗರ್ ಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ. ಈ ಬದುಕಿನಲ್ಲಿ ಅಮೆರಿಕ, ಯುಕೆಯ ಶ್ರೀಮಂತ ಅನುಭವ ಇಲ್ಲ. ಆದರೆ ಕಷ್ಟ ಕಾಲದಲ್ಲಿ ಇಲ್ಲಿಯವರೆಗೆ ಬಂದು ಸಾಧಿಸಿದ್ದೇನೆ ಅನ್ನೋದು ನನಗೆ ಖುಷಿ ಇದೆ. ಅಗತ್ಯವಿದ್ದಾಗ ಕುಟುಂಬದೊಂದಿಗೆ ಇರೋದೆ ನನಗೆ ಸಮಾಧಾನ ತಂದಿದೆ ಎನ್ನುತ್ತಾರೆ ಪಾರ್ಥೀವ್.

ಜೀವನದಲ್ಲಿ ಎಂದೋ ಕಲಿತ ವಿದ್ಯೆ, ಕಷ್ಟಕಾಲದಲ್ಲಿ ಇತರರ ಹೊಟ್ಟೆ ತುಂಬಿಸುವ ಕೆಲಸ. ನಮ್ಮ ಜೀವನದಲ್ಲಿ ಎಂದಿಗೂ ಸೋಲು ಕಾಣಲು ಬಿಡುವುದಿಲ್ಲ ಅನ್ನೋದು ಇದಕ್ಕೆ ಅಲ್ವಾ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss