ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್‌ನ ಯುದ್ಧಭೂಮಿಗೆ ಅಮೆರಿಕದ ಮತ್ತೊಂದು ಯುದ್ಧನೌಕೆ ತಲುಪಿದೆ. ಹಮಾಸ್ ದಾಳಿಯ ಹಿನ್ನಲೆಯಲ್ಲಿ, ಅಮೆರಿಕ ಇಸ್ರೇಲ್‌ಗೆ ಎರಡನೇ ವಿಮಾನವಾಹಕ ನೌಕೆ ಐಸೆನ್‌ಹೋವರ್ ಅನ್ನು ಕಳುಹಿಸಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಜತೆಗೆ ಸ್ಟ್ರೈಕ್ ಗುಂಪನ್ನು ಪೂರ್ವ ಮೆಡಿಟರೇನಿಯನ್‌ಗೆ ಕಳುಹಿಸುತ್ತಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಶನಿವಾರ ಹೇಳಿದ್ದರು. ಅದರಂತೆ ಇಂದು ಎರಡನೇ ವಿಮಾನವಾಹಕ ನೌಕೆ ಇಸ್ರೇಲ್ ತಲುಪಿದೆ.
ಐಸೆನ್‌ಹೋವರ್ ಮತ್ತು ಅದರ ಜೊತೆಗಿರುವ ಯುದ್ಧನೌಕೆಗಳು ಇಸ್ರೇಲ್‌ಗೆ ಆಗಮಿಸಿವೆ. ಎರಡನೇ ಯುದ್ಧನೌಕೆಯನ್ನು ಕಳುಹಿಸಿದ ನಂತರ, ಯುಎಸ್ ಅಧ್ಯಕ್ಷ ಜೋ ಬಿಡನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು.
ಇಸ್ರೇಲಿ ಮುತ್ತಿಗೆ ಮತ್ತು ಗಾಜಾದ ಮೇಲೆ ಬಾಂಬ್ ದಾಳಿಯ ನಡುವೆ ನಾಗರಿಕರನ್ನು ರಕ್ಷಿಸಲು ಅಮೆರಿಕ ಪ್ರಯತ್ನಿಸುತ್ತದೆ. ಗಾಜಾದಲ್ಲಿ ನಾಗರಿಕರನ್ನು ರಕ್ಷಿಸುವ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಬಿಡೆನ್ ಹೇಳಿದರು. ಇಸ್ರೇಲ್‌ನ ಮೇಲೆ ಹಮಾಸ್‌ನ ಕ್ರೂರ ದಾಳಿಯನ್ನು ಖಂಡಿಸಿದರು.