ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೋವಿಡ್ ಸಂಕಷ್ಟದಲ್ಲಿರುವ 92 ರಾಷ್ಟ್ರಗಳಿಗೆ ಫೈಜರ್ ಕೊರೋನಾ ಲಸಿಕೆ ನೀಡುವುದಾಗಿ ಅಮೆರಿಕ ತಿಳಿಸಿದೆ.
ಮುಂದಿನ 1 ವರ್ಷದ ಅವಧಿಯಲ್ಲಿ ಸುಮಾರು 500 ಮಿಲಿಯನ್ ಡೋಸ್ ಗಳನ್ನು ಖರೀದಿಸಲಿರುವ ಅಮೆರಿಕ ಸರ್ಕಾರ ಅವುಗಳನ್ನು 92 ರಾಷ್ಟ್ರಗಳಿಗೆ ನೀಡಲಿದೆ. 200 ಡೋಸ್ ಗಳ ಕೊರೋನಾ ಲಸಿಕೆಯಿಂದ 100 ಜನರ ಪ್ರಾಣ ಉಳಿಯುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.
ಈ ಬಗ್ಗೆ ಶ್ವೇತಭವನ 25 ಮಿಲಿಯನ್ ಡೋಸ್ ಹೆಚ್ಚುವರಿ ಲಸಿಕೆಗಳನ್ನು ವಿದೇಶಗಳಿಗೆ ನೀಡಲು ಮುಂದಾಗಿದ್ದು, ಇದೀಗ ವಿಶ್ವಸಂಸ್ಥೆಯ ಬೆಂಬಲಿತ ಕೋವಾಕ್ಸ್ ಕಾರ್ಯಕ್ರಮದ ಮೂಲಕ, ದಕ್ಷಿಣ ಮತ್ತು ಮಧ್ಯ ಅಮೆರಿಕ, ಏಷ್ಯಾ, ಆಫ್ರಿಕಾ ಮತ್ತು ಇತರೆ ರಾಷ್ಟ್ರಗಳಿಗೆ ಕೊರೋನಾ ಲಸಿಕೆ ನೀಡುವ ಭರವಸೆ ನೀಡಿದೆ.
ಈ ಬಗ್ಗೆ ಮಾತನಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ಬಿಡನ್ ಲಸಿಕೆಗಳನ್ನು ಹಂಚಿಕೊಳ್ಳಲು ಬದ್ಧನಾಗಿರುತ್ತಾನೆ ಏಕೆಂದರೆ ಅದು ಸಾರ್ವಜನಿಕ ಆರೋಗ್ಯ ಮತ್ತು ಅಮೆರಿಕ ಕಾರ್ಯತಂತ್ರದ ಹಿತಾಸಕ್ತಿಯಾಗಿದೆ ಎಂದರು.